ಕರಾವಳಿ

ಮಾಜಿ ಶಾಸಕ ಎ.ಜಿ.ಕೊಡ್ಗಿಯವರ ಸಹೋದರ, ಸಾಮಾಜಿಕ ಧುರೀಣ ಎ. ಅನಂತಕೃಷ್ಣ ಕೊಡ್ಗಿ ನಿಧನ

Pinterest LinkedIn Tumblr

ಕುಂದಾಪುರ: ಕುಂದಾಪುರದ ಉದ್ಯಮಿ, ಅಜಂತಾ ಪ್ರಿಂಟರ್ಸ್ ಮಾಲಕರಾದ ಸಾಮಾಜಿಕ ಧುರೀಣ ಎ. ಅನಂತಕೃಷ್ಣ ಕೊಡ್ಗಿಯವರು (72) ಫೆ. 17 ರಂದು ಶನಿವಾರ ಬೆಳಿಗ್ಗೆ ನಿಧನರಾದರು.

ಸಾಮಾಜಿಕ ಧುರೀಣರಾಗಿದ್ದು, ಕುಂದಾಪುರದ ಲಯನ್ಸ್ ಕ್ಲಬ್, ಬೋರ್ಡ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘ ಮುಂತಾದ ಸಂಘಟನೆಗಳಲ್ಲಿ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಸೇವೆ ಸಲ್ಲಿಸಿದವರು. ಕುಂದಾಪುರ ತಾಲೂಕು ಬಿಜೆಪಿಯ ಖಜಾಂಚಿಯಾಗಿ ಸೇವೆ ಸಲ್ಲಿಸಿದವರು. ತಮ್ಮ ನೇರ ನುಡಿ, ಮಾನವೀಯ ಸಾತ್ವಿಕ ಗುಣಗಳಿಂದ ಸಮಾಜದಲ್ಲಿ ಗೌರವಕ್ಕೆ ಪಾತ್ರರಾದವರು.

ಇವರು ಪತ್ನಿ ಓರ್ವ ಪುತ್ರನನ್ನು ಅಗಲಿದ್ದಾರೆ. ಇವರು ಮಾಜಿ ಶಾಸಕ, ಅಮಾಸೆಬೈಲು ಎ.ಜಿ.ಕೊಡ್ಗಿಯವರ ಸಹೋದರ ಹಾಗೂ ಕುಂದಾಪುರದ ಹಾಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರ ಚಿಕ್ಕಪ್ಪ. ಹಲವಾರು ಮಂದಿ ಗಣ್ಯರು ಇವರ ನಿಧನಕ್ಕೆ ಸಂತಾಪ ಸೂಚಿಸಿ, ಶ್ರದ್ದಾಂಜಲಿ ಅರ್ಪಿಸಿದ್ದಾರೆ. ಮೃತರ ಅಂತ್ಯ ಕ್ರಿಯೆಯನ್ನು ಅಮಾಸೆಬೈಲು, ಮಚ್ಚಟ್ಟು ಮೂಲ ಗೃಹದಲ್ಲಿ ನೆರವೇರಿಸಲಾಯಿತು.

Comments are closed.