ಕರಾವಳಿ

ಬೈಂದೂರು ಸಮೀಪದ ಶಿರೂರಿನಲ್ಲಿ ದೋಣಿ ದುರಂತ: ಇಬ್ಬರು ಮೀನುಗಾರರು ಮೃತ್ಯು

Pinterest LinkedIn Tumblr

ಕುಂದಾಪುರ: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸೋಮವಾರ ಮುಂಜಾನೆ ಸಮುದ್ರದಲ್ಲಿ ಮಗುಚಿದ ಪರಿಣಾಮ, ಮೀನುಗಾರಿಕೆ ನಡೆಸುತ್ತಿದ್ದ ಮೂವರ ಪೈಕಿ ಇಬ್ಬರು ಸಾವಿಗೀಡಾಗಿ ಓರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ಬೈಂದೂರು ತಾಲೂಕಿನ ಶಿರೂರು ಅಳ್ವೆಗದ್ದೆ‌ ಬಂದರಿನಿಂದ 2ಕಿಮೀ ದೂರದಲ್ಲಿ ಅರಬ್ಬೀ ಸಮುದ್ರದಲ್ಲಿ ನಡೆದಿದೆ.

ಶಿರೂರು ಹಡವಿನಕೋಣೆ ನಿವಾಸಿ ನನ್ನು ಅಬ್ದುಲ್ ಸತ್ತಾರ್ (45) ಹಾಗೂ ಭಟ್ಕಳ ಮೂಲದ ಮೊಹಮ್ಮದ್ ಯೂಸುಫ್ ಮಿಸ್ಬಾ(49) ಮೃತರು. ಶಿರೂರು ಗ್ರಾಮದ ಬುಡ್ಡು ಮುಕ್ತಾರ್ (40) ಪ್ರಾಣಾಪಾಯದಿಂದ ಪಾರಾದವರು.

ಭಾನುವಾರ ರಾತ್ರಿ 9:30 ಗಂಟೆಗೆ ಬೀಬಿ ಅಸ್ಮಾ ಮಾಲಿಕತ್ವದ ನುಮೈರ್ ಅಜುಮ್ ಹೆಸರಿನ ನಾಡದೋಣಿಯಲ್ಲಿ ಇವರು ಮೀನುಗಾರಿಕೆಗೆ ಹೊರಟಿದ್ದರು. ಶಿರೂರು ಅಳ್ವೇಗದ್ದೆ ಬಂದರಿನಿಂದ ಮೀನುಗಾರಿಕೆ ಅರಬ್ಬಿ ಸಮುದ್ರ ಹೊರಟು ಸುಮಾರು 2 ಕೀ.ಮಿ ದೂರ ಹೋಗಿ ಮೀನು ಗಾಳವನ್ನು ಹಾಕಿ ಎಳೆಯುತ್ತಿರುವಾಗ ತಡರಾತ್ರಿ 1 ಗಂಟೆಗೆ ಸಮುದ್ರದ ಅಲೆಗೆ ಸಿಕ್ಕಿ ದೋಣಿ ಮುಗಿಚಿ ಬಿದ್ದು, ದೊಣಿಯಲ್ಲಿದ್ದ ಮೂವರು ಜನರು ಸಮುದ್ರ ನೀರಿಗೆ ಬಿದ್ದಿದ್ದು ಹತ್ತಿರವಿದ್ದ ದೋಣಿಯವರಾದ ಮಾಮ್ದು ಯಾಕೂಬ್ ಮಹಮ್ಮದ್ ರಕ್ಷಣೆ ಮಾಡಿ ಸಮುದ್ರ ನೀರಿನಿಂದ ಮೇಲೆ ಎತ್ತಿ ದೋಣಿಯಲ್ಲಿ ಶಿರೂರು ಗ್ರಾಮ ಕಳಿಹಿತ್ಲು ಸಮುದ್ರ ದಡಕ್ಕೆ ತಂದಿದ್ದಾರೆ.

ತಕ್ಷಣ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ಇಬ್ಬರು ಮೃತಪಟ್ಟಿದ್ದು ವೈದ್ಯರು ದೃಢಪಡಿಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.