ಕರಾವಳಿ

ಉಡುಪಿ ಹೆಚ್ಚುವರಿ ಎಸ್‌ಪಿ ಪರಮೇಶ್ವರ ಅನಂತ್‌ ಹೆಗಡೆ ನೇಮಕ

Pinterest LinkedIn Tumblr

ಉಡುಪಿ: ರಾಜ್ಯ ಸರಕಾರ ಎಲ್ಲ ಜಿಲ್ಲೆಗಳಿಗೂ ಇಬ್ಬರು (ಪ್ರಸ್ತುತ ಒಬ್ಬರಿದ್ದಾರೆ) ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ನೇಮಿಸಿ ಆದೇಶಿಸಿದೆ.

ಅದರಂತೆ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಪರಮೇಶ್ವರ ಅನಂತ್‌ ಹೆಗಡೆ (ಪಿ.ಎ. ಹೆಗಡೆ)ಅವರನ್ನು ನೇಮಕ ಮಾಡಲಾಗಿದೆ. ಇವರು ಈ ಹಿಂದೆ ಮಂಗಳೂರು ನಗರ ಅಪರಾಧ (ಸಿಸಿಬಿ) ವಿಭಾಗದ ಡಿವೈಎಸ್‌ಪಿಯಾಗಿ ಸೇವೆಸಲ್ಲಿಸುತ್ತಿದ್ದರು.

ಬಂಟ್ವಾಳದಲ್ಲಿ ಉಪನಿರೀಕ್ಷಕ ಹಾಗೂ ಮೂಲ್ಕಿಯಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರವನ್ನು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಟಿ. ಸಿದ್ದಲಿಂಗಪ್ಪ ನೋಡಿಕೊಳ್ಳಲಿದ್ದಾರೆ. ಅಪರಾಧ ಹಾಗೂ ಡಿಎಆರ್‌ ವಿಭಾಗವನ್ನು ಪರಮೇಶ್ವರ ಅನಂತ್‌ ಹೆಗಡೆ ನಿರ್ವಹಿಸಲಿದ್ದಾರೆ.

Comments are closed.