ಕರಾವಳಿ

ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆಯಾದರೂ ಸಂಸದೆ ನಾಪತ್ತೆ: ರಾಜ್ಯ ಯೂತ್ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ

Pinterest LinkedIn Tumblr

ಉಡುಪಿ: ಕೊಲೆಯಾದಾಗ ಬಂದು ಬೊಬ್ಬೆ ಹೊಡೆಯುವ ನಮ್ಮ ಹೆಮ್ಮೆಯ ಸಂಸದೆ ಶೋಭಕ್ಕ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆಯಾದರು ಕಾಣೆಯಾಗಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರಾವಳಿಯನ್ನು ಬೆಚ್ಚಿಬೀಳಿಸಿದ ಪ್ರಕರಣದಿಂದಾಗಿ ರಾಜ್ಯದ ಜನತೆ ಭಯದಲ್ಲಿ ಬದುಕುವ ವಾತಾವರಣವನ್ನು ಸೃಷ್ಠಿ ಮಾಡಿತ್ತು. ಉಡುಪಿ ಜಿಲ್ಲೆಯ ದಕ್ಷ ಪೋಲಿಸ್ ವರಿಷ್ಠಾಧಿಕಾರಿಯಾಗಿರುವ ಡಾ. ಅರುಣ್ ಕೆ ಅವರು ಘಟನೆ ನಡೆದ ಮಾಹಿತಿ ಲಭಿಸಿದ ತಕ್ಷಣ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪ್ರಕರಣದ ಕುರಿತು ಮಾಹಿತಿ ಪಡೆದು 5 ತನಿಖಾ ತಂಡಗಳನ್ನು ರಚಿಸಿ ಘಟನೆ ನಡೆದ ಮೂರು ದಿನಗಳ ಒಳಗಡೆ ಆರೋಪಿಯ ಜಾಡನ್ನು ಹುಡುಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿಜವಾಗಿಯೂ ಕೆಲವೊಂದು ಕೋಮುವಾದಿ ಮನಸ್ಥಿತಿಯವರು ಫೇಕ್ ಐಡಿ ಫೇಸ್ಬುಕಲ್ಲಿ ರಚಿಸಿ ವಿಕ್ರತಿ ಮೆರೆಯುತ್ತಿದ್ದವರನ್ನು ಪತ್ತೆ ಹಚ್ಚಿ ಜಿಲ್ಲೆಯ ಶಾಂತಿ ವ್ಯವಸ್ಥೆಯನ್ನು ಕಾಪಾಡಬೇಕಾಗಿ ಅಗ್ರಸುತ್ತೇನೆ. ಖಂಡಿತ ಈ ಘಟನೆಯಲ್ಲಿ ಮುಸ್ಲಿಂ ಸಮುದಾಯದವರ ತಾಳ್ಮೆ ಮೆಚ್ಚುವಂತಹದು. ಆರೋಪಿಗೆ ಅತ್ಯಂತ ಕಠಿಣರೀತಿಯಲ್ಲಿ ಶಿಕ್ಷೆ ಆಗುವಂತೆ ಪೊಲೀಸ್ ಇಲಾಖೆ ಕ್ರಮವಹಿಸಬೇಕು ಎಂದವರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

Comments are closed.