ಕರಾವಳಿ

ಹುಲಿವೇಷ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಬರ್ಬರ ಹತ್ಯೆ; ಮುಂದುವರಿದ ತನಿಖೆ

Pinterest LinkedIn Tumblr

ಪುತ್ತೂರು: ಪುತ್ತೂರಿನಲ್ಲಿ ಹುಲಿವೇಷ ತಂಡದ ಪ್ರಮುಖ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಕ್ಷಯ್ ಕಲ್ಲೇಗ ಹತ್ಯೆಯಾದ ಯುವಕನಾಗಿದ್ದು, ಸೋಮವಾರ ಮಧ್ಯರಾತ್ರಿ ನೆಹರೂ ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈಯಲಾಗಿದೆ.

ಕೊಲೆಯಾದ ಅಕ್ಷಯ್ ಕಲ್ಲೇಗ ಪ್ರಸಿದ್ಧ ನವರಾತ್ರಿ ತಂಡವಾದ ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥರು. ಕಳೆದ 6 ವರ್ಷಗಳಿಂದ ಮುಂಚೂಣಿಯಲ್ಲಿದ್ದ ಹುಲಿ ವೇಷ ತಂಡವಾಗಿದ್ದು, ಈ ತಂಡ ಹಲವು ಸ್ಪರ್ಧೆಗಳಲ್ಲಿ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ಪಡೆದಿದೆ.

ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಲ್ಲೇಗ ಹಾಗೂ ಗುಂಪೊಂದರ ಸದಸ್ಯರ ನಡುವೆ ವಾಗ್ವಾದ ನಡೆದಿತ್ತು. ಈ ಘಟನೆಯಲ್ಲಿ ಉಂಟಾದ ನಷ್ಟದ ಬಗ್ಗೆ ಮಾತನಾಡಲು ನೆಹರು ನಗರಕ್ಕೆ ಆಗಮಿಸಲು ಗುಂಪಿನ ಸದಸ್ಯರು ಸೂಚಿಸಿದ್ದರು. ಮಾತನಾಡಲು ಆಗಮಿಸಿದ್ದಾಗ ಈತನನ್ನು ಹಿಂಬಾಲಿಸಿ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ನಂತರ ಯುವಕನ ಶವ ರಸ್ತೆ ಬದಿಯ ಪೊದೆಗಳ ಬಳಿ ಪತ್ತೆಯಾಗಿದೆ.

ಘಟನೆ ಸಂಬಂಧ ಮನೀಶ್ ಮತ್ತು ಚೇತು ಪೊಲೀಸರ ಮುಂದೆ ಶರಣಾಗಿದ್ದು, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಅಪರಾಧದಲ್ಲಿ ನೇರವಾಗಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಈ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.