ಕರಾವಳಿ

ಗಣೇಶ ಚತುರ್ಥಿಗೆ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆ.19 ರಂದು ಸರ್ಕಾರಿ ರಜೆ ನೀಡಲು ಆದೇಶ

Pinterest LinkedIn Tumblr

ಬೆಂಗಳೂರು: ಗಣೇಶ ಚತುರ್ಥಿಯ ಪ್ರಯುಕ್ತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೋಮವಾರದ ಬದಲಾಗಿ ಮಂಗಳವಾರ ಸಾರ್ವತ್ರಿಕ ರಜೆ ನೀಡಲು ಸರ್ಕಾರ ಆದೇಶ ಹೊರಡಿಸಿ‌ ಪ್ರಕಟಿಸಿದೆ.

ಈ ಬಾರಿ ಎರಡು ದಿನಗಳೆಂಬ ಹಿನ್ನೆಲೆ ಗಣೇಶ ಚತುರ್ಥಿ ಆಚರಣೆಯ ದಿನದ ಬಗ್ಗೆ ಗೊಂದಲಗಳಿವೆ. ಹಲವೆಡೆ ಸೆ.18 ಸೋಮವಾರ ಹಬ್ಬ ಆಚರಣೆಯಿದ್ದು ಮತ್ತಷ್ಟು ಕಡೆ ಸೆ.19 ಮಂಗಳವಾರ ಆಚರಿಸಲಾಗುತ್ತಿದೆ. ಆದರೆ ಸರ್ಕಾರ ನಿಗದಿ ಪಡಿಸಿದ ರಜೆಯು ಸೋಮವಾರ ಎಂದಿದ್ದು ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಹಬ್ಬ ಆಚರಿಸುವ ಕಾರಣ ಅದೇ ದಿನ ಸರ್ಕಾರಿ ರಜೆ ನೀಡಬೇಕು ಎಂದು ಹೇಳಲಾಗಿತ್ತು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಸೆ.19 ಮಂಗಳವಾರದಂದು ಸರಕಾರಿ ರಜೆ ನೀಡುವ ಬಗ್ಗೆ ಸರಕಾರದ ಕಾರ್ಯದರ್ಶಿಗಳು ಉಡುಪಿ ಹಾಗೂ ದ.ಕ ಜಿಲ್ಲೆಯ ಡಿಸಿ ಅವರಿಗೆ ಆದೇಶ ನೀಡಿದ್ದಾರೆ.

Comments are closed.