ಕರ್ನಾಟಕ

ಗೋಮೂತ್ರದಿಂದ ವಿಧಾನಸೌಧದ ದ್ವಾರ ಶುದ್ಧೀಕರಣಗೊಳಿಸಿದ ಕಾಂಗ್ರೆಸ್ ಮುಖಂಡರು..!

Pinterest LinkedIn Tumblr

ಬೆಂಗಳೂರು: ಬೆಂಗಳೂರು ವಿಧಾನಸೌಧ ಮುಂಭಾಗ ಹೈಕೋರ್ಟ್ ಎದುರು ಅಂಬೇಡ್ಕರ್ ವೀಧಿ ರಸ್ತೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ರಸ್ತೆಗೆ ಗೋಮೂತ್ರ ಸಿಂಪಡನೆ ಮಾಡಿದರು.

ಭ್ರಷ್ಟ 40% ಬಿಜೆಪಿ ಸರ್ಕಾರದ ದುರಾಡಳಿತ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಗೋಮೂತ್ರದಿಂದ ಮೂಲಕ ವಿಧಾನಸೌಧದ ದ್ವಾರ ಬಾಗಿಲಿನಲ್ಲಿ ಶುದ್ಧೀಕರಣ ಮಾಡಿ ಹಾಗೂ ಪೂಜೆಯನ್ನು ನೆರವೇರಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

ಸೋಮವಾರ ವಿಶೇಷ ಅಧಿವೇಶನ ಆರಂಭಕ್ಕೂ ಮೊದಲೇ ಕಾಂಗ್ರೆಸ್ ಕಾರ್ಯಕರ್ತರು ವಿಧಾನಸಭೆ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ಯರು ಗೋಮೂತ್ರ ಸಿಂಪಡಿಸಿದರು. ಹೊಸದಾಗಿ ಚುನಾಯಿತವಾಗಿರುವ ಕಾಂಗ್ರೆಸ್ ಸರ್ಕಾರವು ತನ್ನ ಮೊದಲ ಅಧಿವೇಶನ ನಡೆಸಲು ಮುನ್ನ ವಿಧಾನಸೌಧವನ್ನು ಶುದ್ದೀಕರಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ.

ಈ ಹಿಂದೆ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆಗಳು ಹಲವೆಡೆ ಗೋಮೂತ್ರ ಸಿಂಪಡಿಸಿ ಕಾಂಗ್ರೆಸ್​ಗೆ ಟಾಂಗ್ ಕೊಟ್ಟಿದ್ದರು. ಇದೀಗ ಕಾಂಗ್ರೆಸ್ ಕಾರ್ಯಕರ್ತರು ಸಹ ಬಿಜೆಪಿ ಮತ್ತು ಹಿಂದೂ ಪರ ಸಂಫಟನೆಗಳಿಗೆ ತಿರುಗೇಟು ನೀಡಿದ್ದಾರೆ.

Comments are closed.