ಕರಾವಳಿ

ಪೊಲೀಸ್ ಜೀಪಿಗೆ ಬೈಕ್ ಢಿಕ್ಕಿಯಾಗಿ ಪಾಣಾಜೆ ಸಿಎ ಬ್ಯಾಂಕ್ ಮ್ಯಾನೇಜರ್ ಮೃತ್ಯು

Pinterest LinkedIn Tumblr

ಪುತ್ತೂರು: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪ್ಯ ಬಳಿ ಪೊಲೀಸ್ ಜೀಪಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.

ಪಾಣಾಜೆ ಗ್ರಾಮದ ಕೋಟೆ ನಿವಾಸಿ, ಆರ್ಲಪದವಿನಲ್ಲಿರುವ ಪಾಣಾಜೆ ಸಿ.ಎ. ಬ್ಯಾಂಕ್ ಮ್ಯಾನೇಜರ್ ಲಕ್ಷ್ಮಣ ನಾಯ್ಕ್ (51) ಮೃತರು.

ಪುತ್ತೂರು ಕಡೆಗೆ ಬರುತ್ತಿದ್ದ ಪೊಲೀಸ್ ಜೀಪು ಹಾಗೂ ಆರ್ಲಪದವು ಕಡೆಗೆ ಸಂಚರಿಸುತಿದ್ದ ಬೈಕ್ ನಡುವೆ ಈ ಘಟನೆ ಸಂಭವಿಸಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

 

Comments are closed.