ಕರಾವಳಿ

ನೀರೆತ್ತುವಾಗ ಮನೆಯ ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಿಸಿದ ಕುಂದಾಪುರ ಅಗ್ನಿಶಾಮಕದಳ

Pinterest LinkedIn Tumblr

ಕುಂದಾಪುರ: ನೀರು ಎತ್ತುವಾಗ ಮನೆ‌ ಸಮೀಪದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಮಹಿಳೆಯೊಬ್ಬರನ್ನು ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಫೆ.17 ಶುಕ್ರವಾರದಂದು ತೆಕ್ಕಟ್ಟೆ ಸಮೀಪದ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಳಿ ನಡೆದಿದೆ.

ಇಲ್ಲಿನ ನಿವಾಸಿ ರತ್ನಾವತಿ ಶೆಟ್ಟಿ (52) ಬಾವಿಗೆ ಬಿದ್ದು ರಕ್ಷಣೆಗೊಳಪಟ್ಟ ಮಹಿಳೆ. ಇವರು ಬೆಳಿಗ್ಗೆ ಬಾವಿಯಿಂದ ನೀರೆತ್ತುವಾಗ ಆಕಸ್ಮಿಕ ಕಾಲು ಜಾರಿ 20 ಅಡಿ ಆಳದ ಬಾವಿಗೆ ಬಿದ್ದಿದ್ದು ತಕ್ಷಣ ಮನೆಯವರು ಅಗ್ನಿ ಶಾಮಕ ದಳದವರಿಗೆ ತಿಳಿಸಿದ್ದಾರೆ. ಅಗ್ನಿ ಶಾಮಕದಳದ ಸಿಬ್ಬಂದಿ ನಾಗರಾಜ್ ಪೂಜಾರಿ ಅವರು ಬಾವಿಗೆ ಇಳಿದು, ಮಹಿಳೆಯನ್ನು ರಕ್ಷಿಸಿದ್ದಾರೆ. ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಕುಂದಾಪುರ ಅಗ್ನಿಶಾಮಕ ದಳ ಠಾಣಾಧಿಕಾರಿ ಬಾಬು ಶೆಟ್ಟಿ, ಪ್ರಮುಖ ಅಗ್ನಿಶಾಮಕ ರವೀಂದ್ರ ದೇವಾಡಿಗ, ಸಿಬ್ಬಂದಿಗಳಾದ ಆಸೀಫ್, ಸಂತೋಷ ಶೆಟ್ಟಿ, ಅಗ್ನಿಶಾಮಕ ವಾಹನ ಚಾಲಕ‌ ಮುಸ್ತಾಫ್, ಸ್ಥಳೀಯರು ಸಹಕರಿಸಿದ್ದರು.

Comments are closed.