ಕರಾವಳಿ

ಮಂಗಳೂರಿನ ಜುವೆಲ್ಲರಿಯಲ್ಲಿ ಹತ್ಯೆ; ಶಂಕಿತನ ಮತ್ತಷ್ಟು ಫೋಟೋ ಬಿಡುಗಡೆ

Pinterest LinkedIn Tumblr

ಮಂಗಳೂರು: ನಗರದ ಹಂಪನಕಟ್ಟೆಯ ಜುವೆಲ್ಲರಿಯೊಂದರಲ್ಲಿ ಕಳೆದ ಶುಕ್ರವಾರ ಹಾಡುಹಗಲೇ ನಡೆದ ಸಿಬ್ಬಂದಿ ಕೊಲೆ, ಅಂಗಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ದುಷ್ಕರ್ಮಿಯ ಇನ್ನಷ್ಟು ಚಿತ್ರಗಳನ್ನು ಪೊಲೀಸರು ಫೆ.10 ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

ಹಂಪನಕಟ್ಟೆ ಮಿಲಾಗ್ರಿಸ್ ಬಳಿ ಫೆ.3ರಂದು ಚಿನ್ನಾಭರಣ ಅಂಗಡಿಯಲ್ಲಿ ಅತ್ತಾವರ ನಿವಾಸಿ ರಾಘವೇಂದ್ರ ಆಚಾರ್ (55) ಅಪರಿಚಿತ ದುಷ್ಕರ್ಮಿ ಇರಿದ ಪರಿಣಾಮ ಮೃತಪಟ್ಟಿದ್ದರು. ಘಟನೆ ನಡೆದಾಗ ಅಂಗಡಿಯಲ್ಲಿ ಸಿಬ್ಬಂದಿ ಮಾತ್ರವೇ ಇದ್ದರು.

ಮುಸುಕುಧಾರಿಯೊಬ್ಬ ಅಂಗಡಿಯಿಂದ ಹೊರ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಧ್ಯಾಹ್ನದ ಊಟ ಮುಗಿಸಿ ಅಂಗಡಿಗೆ ಹಿಂತಿರುಗಿದಾಗ ಅಂಗಡಿ ಮಾಲಕರು ಘಟನೆ ಬಗ್ಗೆ ತಿಳಿದುಕೊಂಡಿದ್ದರು.

ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಸಂಪರ್ಕಿಸಿ:
ಪಿ.ಎ ಹೆಗಡೆ -ಎಸಿಪಿ ಸಿಸಿಬಿ, ಮಂಗಳೂರು ನಗರ -ಮೊ: 9945054333.
ಮಹೇಶ್ ಕುಮಾರ್ – ಎಸಿಪಿ ಕೇಂದ್ರ ಉಪವಿಭಾಗ, ಮಂಗಳೂರು ನಗರ – ಮೊ: 9480805320

Comments are closed.