ಪ್ರಮುಖ ವರದಿಗಳು

ಪಂಚಭೂತಗಳಲ್ಲಿ ಲೀನರಾದ  ಹೀರಾಬೆನ್ ಮೋದಿ; ತಾಯಿಯ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟ ಪ್ರಧಾನಿ ಮೋದಿ

Pinterest LinkedIn Tumblr

ಅಹ್ಮದಾಬಾದ್:  ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರ ಅಂತ್ಯಕ್ರಿಯೆ ಜರುಗಿತು. ಅಹ್ಮದಾಬಾದ್ ತಲುಪಿದ ಪ್ರಧಾನಿ ಮೋದಿಯವರು ತಾಯಿಯ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟು ಅಂತಿಮ ಯಾತ್ರೆಯಲ್ಲಿ ಸಾಗಿದರು.

ಮೋದಿಯವರ ಸಹೋದರ ಪ್ರಹ್ಲಾದ್ ಮೋದಿಯವರ ಮನೆಯಿಂದ ಹೀರಾಬೆನ್ ಅವರ ಅಂತಿಮ ಯಾತ್ರೆ ಸಾಗಿದ್ದು, ಈ ವೇಳೆ ತಾಯಿಯ ಪಾರ್ಥೀವ ಶರೀರಕ್ಕೆ ಹೆಗಲುಕೊಟ್ಟು ಸಾಗಿದರು.

ತಾಯಿಯವರ ನಿಧನದ ಸುದ್ದಿ ತಿಳಿಯುತ್ತಲೇ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ಅಹ್ಮದಾಬಾದ್’ಗೆ ತಲುಪಿದರು. ನಂತರ ತಾಯಿಯ ಅಂತಿಮ ದರ್ಶನ ಪಡೆದ ಮೋದಿಯವರು, ಕಾಲಿಗೆ ನಮಸ್ಕರಿಸಿ ಪಾರ್ಥೀವ ಶರೀರಕ್ಕೆ ಹೆಗಲುಕೊಟ್ಟು ನಡೆದರು.

ಬಳಿಕ ಪಾರ್ಥೀವ ಶರೀರವನ್ನು ಸೆಕ್ಟರ್ 30ರ ರುದ್ರಭೂಮಿಗೆ ತರಲಾಗಿದ್ದು ಅಂತಿಮ ದರ್ಶನದ ಬಳಿಕ ಸಂಪ್ರದಾಯದಂತೆ ಹೀರಾಬೆನ್ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಹೀರಾಬೆನ್ ಅವರು ಪಾರ್ಥೀವ ಶರೀರಕ್ಕೆ ಪ್ರಧಾನಿ ಮೋದಿಯವರು ಅಗ್ನಿ ಸ್ಪರ್ಶ ಮಾಡಿದರು.

Comments are closed.