ಕರಾವಳಿ

ಕೋಟದ ಮಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತರಕಾರಿ ಸಾಗಾಟದ ಗೂಡ್ಸ್ ಟೆಂಪೋ ಪಲ್ಟಿ

Pinterest LinkedIn Tumblr

ಕುಂದಾಪುರ: ತರಕಾರಿ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋ ವಾಹನ ಪಲ್ಟಿಯಾದ ಘಟನೆ ಕೋಟ ಸಮೀಪದ ಮಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಉಡುಪಿಯಿಂದ ಹೆಮ್ಮಾಡಿ ಮೂಲಕವಾಗಿ ಕೊಲ್ಲೂರಿನ ಕಡೆ ತರಕಾರಿ ತುಂಬಿಸಿಕೊಂಡು ಸಾಗುತ್ತಿದ್ದ ಗೂಡ್ಸ್ ವಾಹನದ ಟಯರ್ ಸ್ಫೋಟಗೊಂಡ ಕಾರಣ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ.

ಘಟನೆ ಪರಿಣಾಮ ವಾಹನದಲ್ಲಿದ್ದ ತರಕಾರಿಗಳು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿತ್ತು. ಅದೃಷ್ಟವಶಾತ್ ಚಾಲಕ ಹಾಗೂ ನಿರದವಾಹಕ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.