ಕರಾವಳಿ

ತ್ಯಾಜ್ಯ ಸಂಗ್ರಹಣಾ ವಾಹನ ಖುದ್ದು ಚಲಾಯಿಸಿಕೊಂಡು ತ್ಯಾಜ್ಯ ಸಂಗ್ರಹಿಸಿದ ಉಡುಪಿ ಜಿ.ಪಂ ಸಿಇಒ

Pinterest LinkedIn Tumblr

ಉಡುಪಿ: ಬಡಗಬೆಟ್ಟು ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ‌ ನೀಡಿ ತಾವೇ ಸ್ವತಃ ತಾಜ್ಯ‌ ನಿರ್ವಹಣಾ ವಾಹನ‌ ಚಾಲನೆ‌ ಮಾಡಿದ‌ ಜಿಲ್ಲಾ ಪಂಚಾಯತ್ ಮುಖ್ಯ‌‌ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇಂದು ಬೆಳಿಗ್ಗೆ ಉಡುಪಿ ಜಿಲ್ಲಾ‌ ಪಂಚಾಯತ್ ಮುಖ್ಯ‌ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಅವರು ಬಡಗಬೆಟ್ಟು ಗ್ರಾಮ‌ ಪಂಚಾಯತ್ ನ ತ್ಯಾಜ್ಯ‌ ನಿರ್ವಹಣಾ ವಾಹನವನ್ನು ಚಾಲನೆ‌‌ ಮಾಡಿ ಮನೆ ಮನೆ ಯಿಂದ ತ್ಯಾಜ್ಯ‌ ಸಂಗ್ರಹಣೆಯಲ್ಲಿ ಭಾಗಿಯಾಗಿ ಎಲ್ಲರ ಅಚ್ಚರಿಗೆ ಕಾರಣರಾದರು. ಐಎಎಸ್ ಅಧಿಕಾರಿಯೊಬ್ಬರ ಈ ನಡೆ ಜಿಲ್ಲೆಯ ಇಡೀ ತ್ಯಾಜ್ಯ ನಿರ್ವಹಣಾ ಕಾರ್ಯಕರ್ತರಿಗೆ ಸ್ಪೂರ್ತಿ ತಂದಿದೆ.

ಈ ಸಂದರ್ಭದಲ್ಲಿ ಗ್ರಾಮ‌ ಪಂಚಾಯತ್ ಸದಸ್ಯರು, ಅಭಿವೃದ್ದಿ ಅಧಿಕಾರಿಗಳು, ಜಿ.ಪಂ‌ ಮುಖ್ಯ ಯೋಜನಾಧಿಕಾರಿಗಳು, ಇತರ‌ ಪ್ರಮುಖರು‌ ಉಪಸ್ಥಿತರಿದ್ದರು.

Comments are closed.