ಕರ್ನಾಟಕ

ಬಸ್ ಇಳಿಯುವಾಗ ಬಿದ್ದು ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ರಕ್ಷಿತಾಳ ಅಂಗಾಂಗ ದಾನಕ್ಕೆ ಪೋಷಕರ ಒಪ್ಪಿಗೆ

Pinterest LinkedIn Tumblr

ಚಿಕ್ಕಮಗಳೂರು: ಅಪಘಾತದಲ್ಲಿ ಗಾಯಗೊಂಡು ಮೆದಳು ನಿಷ್ಕ್ರಿಯವಾಗಿದ್ದ ಯುವತಿ ರಕ್ಷಿತಾ ಬಾಯಿ ಅವರ ಅಂಗಾಂಗ ದಾನಕ್ಕೆ ಪೋಷಕರು ಒಪ್ಪಿಗೆ ನೀಡಿದ್ದಾರೆ. ಅಂಗಾಂಗ ದಾನ ಪ್ರಕ್ರಿಯೆ ಆರಂಭವಾಗಿದ್ದು ಸೆ. 22ರಂದು ಅಂಗಾಂಗಳನ್ನು ನೀಡುವ ಕಾರ್ಯ ನಡೆಯಲಿದೆ.

ಜಿಲ್ಲಾಸ್ಪತ್ರೆಯಲ್ಲಿ ಡಾ.ಚಂದ್ರಶೇಖರ್‌ ಸಾಲಿಮಠ್‌, ಡಾ.ಎಂ.ಪ್ರಶಾಂತ್‌, ಡಾ.ಕೆ.ನಾಗೇಶ್‌, ಡಾ.ಎಚ್‌.ಜಿ.ನಾಗರಾಜ್‌ ತಂಡದಲ್ಲಿದ್ದಾರೆ.

ರಕ್ಷಿತಾ ಅವರು ಕಡೂರು ತಾಲ್ಲೂಕಿನ ಸೋಮನಹಳ್ಳಿ ತಾಂಡ್ಯದವರಾಗಿದ್ದು ನಗರ ಬಸವನಹಳ್ಳಿ ಸರ್ಕಾರಿ ಪದವಿಪೂವ ಕಾಲೇಜಿನ ವಿದ್ಯಾರ್ಥಿನಿ. ಇದೇ 18ರಂದು ಎಐಟಿ ವೃತ್ತದ ಸಮೀಪದಲ್ಲಿ ಬಸ್‌ನಿಂದ ಇಳಿಯುವಾಗ ಅಪಘಾತ ಸಂಭವಿಸಿದ್ದು ತೀವ್ರವಾಗಿ ಗಾಯಗೊಂಡಿದ್ದರು.

ಅಂಗಾಂಗ ದಾನದ ಬಗ್ಗೆ ರಕ್ಷಿತಾ ತಂದೆ ಶೇಖರ್‌ ನಾಯ್ಕ, ತಾಯಿ ಲಕ್ಷ್ಮಿ ಬಾಯಿ ಅವರಿಗೆ ವಿವರಿಸಲಾಗಿದೆ. ಹೃದಯ, ಶ್ವಾಸಕೋಶ, ಲಿವರ್‌, ಮೂತ್ರಕೋಶ, ನೇತ್ರಗಳನ್ನು ದಾನ ನೀಡಲಾಗುವುದು. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯವರು ಹೃದಯ, ಚೈನ್ನೈನ ಆಸ್ಪತ್ರೆಯವರು ಶ್ವಾಸಕೋಶ, ಚಿಕ್ಕಮಗಳೂರಿನ ನೇತ್ರ ಬ್ಯಾಂಕ್‌ಗೆ ಕಣ್ಣು ಗಳನ್ನು ನೀಡಲು ಸಿದ್ಧತೆ ನಡೆದಿದೆ. ಆಸ್ಪತ್ರೆಗಳ ತಂಡಗಳು ಶಸ್ತ್ರಚಿಕಿತ್ಸೆ ನಡೆಸಿ ಅಂಗಾಂಗ ಒಯ್ಯಲಿವೆ. 22ರಂದು ಬೆಳಿಗ್ಗೆ 10 ಗಂಟೆ ಪಕ್ರಿಯೆ ನಡೆಯಲಿದೆ ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿ.ಮೋಹನಕುಮಾರ್‌ ತಿಳಿಸಿದ್ದಾರೆ.

 

Comments are closed.