ಅಂತರಾಷ್ಟ್ರೀಯ

ಬ್ರಿಟನ್ ರಾಣಿ ಎಲಿಜಬೆತ್-II ನಿಧನ, ಪ್ರಧಾನಿ ಮೋದಿ ಸಹಿತ ಗಣ್ಯರ ಸಂತಾಪ

Pinterest LinkedIn Tumblr

ಲಂಡನ್: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್-II ಅವರ ಗುರುವಾರ ರಾತ್ರಿ ನಿಧನರಾಗಿದ್ದಾರೆ.

ಬ್ರಿಟನ್‌ನ ಬಲ್‌ಮೋರಾಲ್‌ನಲ್ಲಿ ಸೂಕ್ತ ವೈದ್ಯಕೀಯ ನಿಗಾದಲ್ಲಿದ್ದ 96 ವರ್ಷದ ರಾಣಿ ಎಲಿಜಬೆತ್- II ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ ರಾಣಿ ಎಲಿಜಬೆತ್-II ಅವರು ಈ ವಾರದ ಆರಂಭದಲ್ಲಿ ಸ್ಕಾಟ್ಲೆಂಡ್‌ನಲ್ಲಿ ಹೊಸ ಪ್ರಧಾನಿ ಲಿಜ್ ಟ್ರಸ್ ಅವರ ನೇಮಕ ಸೇರಿದಂತೆ ತಮ್ಮ ಹಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು.

ಎಲಿಜಬೆತ್-II ಅವರು 1953 ರಿಂದ ಬ್ರಿಟನ್ ರಾಣಿಯಾಗಿ ಸುದೀರ್ಘ ಏಳು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಎಲಿಜಬೆತ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Comments are closed.