ಪ್ರಮುಖ ವರದಿಗಳು

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ನೂರಾರು ಪಕ್ಷಿಗಳ ಮಾರಣಹೋಮ: ಮನಕಲಕುವ ವಿಡಿಯೋ ಕಂಡು ನೆಟ್ಟಿಗರ ಆಕ್ರೋಶ

Pinterest LinkedIn Tumblr

ತಿರುವನಂತಪುರಂ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಲುವಾಗಿ ಬೃಹತ್ ಮರವೊಂದನ್ನು ಏಕಾಏಕಿ ಉರುಳಿಸಿದ ಪರಿಣಾಮ ನೂರಾರು ಪಕ್ಷಿಗಳು ಸತ್ತು, ಗೂಡಿನಲ್ಲಿದ್ದ ಮೊಟ್ಟೆಗಳು ನಾಶವಾದ ಹೃದಯ ವಿದ್ರಾವಕ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತಿರುರಂಗದಿ ನಗರದ ವಿಕೆಪಡಿ ಎಂಬಲ್ಲಿ ನಡೆದಿದೆ.

ಮರದ ಸಹಿತ ಅದರಲ್ಲಿದ್ದ ಅಸಂಖ್ಯ ಪಕ್ಷಿಗಳು ಮಾರಣಹೋಮವಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಪಕ್ಷಿಪ್ರಿಯರು, ಪರಿಸರವಾದಿಗಳ ಸಹಿತ ಜನ ಆಕ್ರೋಶ ಹೊರಹಾಕಿದ್ದಾರೆ.

ಮರ ಉರುಳಿಸುವ ಮೊದಲು ಪಕ್ಷಿಗಳಿಗೆ ಹಾರಲು ಅವಕಾಶ ನೀಡಬೇಕಿತ್ತು. ಇಲ್ಲವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ಇದ್ಯಾವುದೂ ಮಾಡದೇ ಏಕಾಏಕಿ ಮರವನ್ನು ಉರುಳಿಸಿರುವ ಪರಿಣಾಮ ಗೂಡು ಸಮೇತ ಹಕ್ಕಿಗಳು ಮರದ ಕೊಂಬೆಗಳಿಗೆ ಸಿಲುಕಿ ಮೃತ ಪಟ್ಟಿವೆ. ಇನ್ನೂ ಕೆಲವು ಮರ ಬಿದ್ದ ರಭಸಕ್ಕೆ ನೆಲಕ್ಕೆ ಅಪ್ಪಳಿಸಿ ಸಾವನ್ನಪ್ಪಿವೆ. ಏಕಾಏಕಿ ಜೆಸಿಬಿ ಮೂಲಕ ಮರ ಉರುಳಿಸಿದ್ದು ಮರದಲ್ಲಿ ಗೂಡು ಕಟ್ಟಿದ ಪಕ್ಷಿಗಳು ವಿಚಲಿತಗೊಂಡು ಹಾರಿವೆ. ಆದರೆ, ಆದರೆ ಬಹಳಷ್ಟು ಪಕ್ಷಿಗಳು ತಮ್ಮ ಪ್ರಾಣ ಕಳೆದುಕೊಂಡಿವೆ. ಸಣ್ಣ ಮರಿಗಳು, ಮೊಟ್ಟೆ ನಾಶವಾಗಿವೆ.

ಈ ಘಟನೆಯ ವಿಡಿಯೋ ತುಣುಕವೊಂದು ವೈರಲ್ ಆದ ಬೆನ್ನಲ್ಲೇ‌ ನೆಟ್ಟಿಗರ ಸಹಿತ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಷ ವ್ಯಕ್ತವಾಗಿದ್ದು ಸಂಬಂದಪಟ್ಟವರೆಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ ಕೇಳಿಬರುತ್ತಿದೆ.

Comments are closed.