ಕರ್ನಾಟಕ

ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯದಡಿ ಬಂಧಿಯಾದ ಮುರುಘಾ ಶ್ರೀ 3 ದಿನ ಪೊಲೀಸ್ ಕಸ್ಟಡಿಗೆ

Pinterest LinkedIn Tumblr

ಬೆಂಗಳೂರು: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಚಿತ್ರದುರ್ಗದ ಪ್ರಸಿದ್ಧ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣ ಸ್ವಾಮೀಜಿಯನ್ನು ಗುರುವಾರ ರಾತ್ರಿ ಪೊಲೀಸರು ಬಂಧಿಸಿದ್ದು ಶುಕ್ರವಾರ ಬೆಳಿಗ್ಗೆ‌ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ಶ್ರೀಯನ್ನು ದಾಖಲಿಸಿದ್ದರು.

ಆದರೆ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯದ ಮುಂದೆ 5 ದಿನಗಳ ಕಾಲ ಕಸ್ಟಡಿಗೆ ಬೇಕೆಂದು ಪೊಲೀಸರು ಮನವಿ ಮಾಡಿದ್ದು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದೆ.

ಅನಾರೋಗ್ಯ ನೆಪವೊಡ್ಡಿ ಆಸ್ಪತ್ರೆಗೆ ಶ್ರೀಯನ್ನು ಕರೆದೊಯ್ಯಲಾಗಿದ್ದು ಅಲ್ಲಿಂದ ಮತ್ತೆ ಪೊಲೀಸ್ ವಾಹನದಲ್ಲೇ ನ್ಯಾಯಾಲಯಕ್ಕೆ ಹಾಜರು ಮಾಡಲಾಗಿತ್ತು. ಖಾವಿ ಮೇಲೆ ಬಿಳಿ ವಸ್ತ್ರ ಧರಿಸಿ ಶ್ರೀ ಮುಖ ಮುಚ್ಚಿಕೊಂಡಿದ್ದರು.

 

Comments are closed.