ಕರಾವಳಿ

ಕುಂದಾಪುರದಿಂದ ಭಟ್ಕಳದ ಮದುವೆ ಕಾರ್ಯಕ್ರಮಕ್ಕೆ ಸಾಗಿಸುತ್ತಿದ್ದ 150 ಕೆ.ಜಿ ಗೋಮಾಂಸ ವಶ | ಓರ್ವ ಬಂಧನ

Pinterest LinkedIn Tumblr

ಕುಂದಾಪುರ: ಕುಂದಾಪುರ ಕಡೆಯಿಂದ ಭಟ್ಕಳದತ್ತ ಕಾರಿನಲ್ಲಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಬಂದ ಖಚಿತ ವರ್ತಮಾನದಂತೆ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದು ಓರ್ವ ಪರಾರಿಯಾಗಿದ್ದಾನೆ. ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ‌ ಈ ಘಟನೆ ನಡೆದಿದೆ.

ಭಟ್ಕಳ ನಿವಾಸಿ ಮಹಮ್ಮದ್ ಗೌಸ್ ಗವಾಯಿ (37)‌ ಬಂಧಿತ ಆರೋಪಿ. ನಜ್ಮುಲ್ ಎಂಬಾತ ಪರಾರಿಯಾದ ಆರೋಪಿ.

ಪೊಲೀಸರಿಗೆ ಬಂದ ಮಾಹಿತಿಯಂತೆ ನ್ಯಾನೋ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಕಾರಿನ ಚಾಲಕ ಕಾರನ್ನು ಹಿಂದೆ ನಿಲಿಸಿದ್ದು, ಪಕ್ಕದ ಸೀಟಿನಲ್ಲಿ ಕುಳಿತುಕೊಂಡಿದ್ದ ನಜ್ಮುಲ್ ಕಾರಿನಿಂದ ಇಳಿದು ಓಡಿ ಪರಾರಿಯಾಗಿದ್ದಾನೆ. ಚಾಲಕನಾದ ಮಹಮ್ಮದ್ ಗೌಸ್ ಗವಾಯಿಯನ್ನು ವಿಚಾರಿಸಿದಾಗ ಗೋ ಮಾಂಸವನ್ನು ಕುಂದಾಪುರ ಕಡೆಯಿಂದ ತಂದು ಭಟ್ಕಳದ ಮದುವೆ ಕಾರ್ಯಕ್ರಮಕ್ಕೆ ನೀಡಲು ಹೋತ್ತಿರುವುದಾಗಿ ತಿಳಿಸಿದ್ದಾನೆ. 22 ಸಾವಿರ ಮೌಲ್ಯದ 150 ಕೆ.ಜಿ ಮಾಂಸ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಜಾನುವಾರು ಕಳವುಗೈದು ಮಾಂಸ ಮಾಡಿ ಸಾಗಿಸುತ್ತಿರುವುದಾಗಿ ತಿಳಿದುಬಂದಿದೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

 

Comments are closed.