ಕರಾವಳಿ

ಇಂದಿನಿಂದ ಬಿಗ್ ಬಾಸ್ ಓಟಿಟಿ: ಬಿಗ್ ಬಾಸ್ ಮನೆಗೆ ಕಾಲಿಟ್ಟ ಸ್ಟಾರ್ ತುಳುನಾಡಿನ ನಟ ರೂಪೇಶ್ ಶೆಟ್ಟಿ

Pinterest LinkedIn Tumblr

ಬೆಂಗಳೂರು: ಇಂದಿನಿಂದ ಆರಂಭವಾದ ಬಿಗ್ ಬಾಸ್ ಓಟಿಟಿ ಸೀಸನ್-1ಗೆ ತುಳುನಾಡಿನ ಖ್ಯಾತ ನಟ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಮೂಲತಃ ಉಪ್ಪಳದವಾರದ ರೂಪೇಶ್ ಶೆಟ್ಟಿ, ಕನ್ನಡದ ಡೇಂಜರ್ ಝೋನ್, ಅನುಷ್ಕಾ, ಸ್ಮೈಲ್ ಪ್ಲೀಸ್, ನಿಶಬ್ಧ-2 ಮೊದಲಾದ ಚಿತ್ರಗಳಲ್ಲಿ ಹಾಗೂ ತುಳುವಿನ ಹಲವು ಚಿತ್ರದಲ್ಲಿ ನಟನಾಗಿದ್ದು ಅವರ ನಿರ್ದೇಶನದ ಗಿರ್ಗಿಟ್ ಚಿತ್ರ ಕೋಸ್ಟಲ್ ವುಡ್’ನಲ್ಲಿ ಭಾರೀ ಕಮಾಲ್ ಮಾಡಿತ್ತು.

ಇಂದಿನಿಂದ ಬಿಗ್ ಬಾಸ್ ಕನ್ನಡ ಓಟಿಟಿ ಶೋ…
ವಿಡಿಯೋ-ಆನ್-ಡಿಮ್ಯಾಂಡ್ ಸ್ಟ್ರೀಮಿಂಗ್ ಪ್ಲಾಟ್‍ಫಾರ್ಮ್ ಆಗಿರುವ ವಯೋಕಾಂ18 ರ ವೂಟ್‍ನಲ್ಲಿ ಇದೇ ಮೊದಲ ಬಾರಿಗೆ ಕನ್ನಡದ ಬಿಗ್‍ಬಾಸ್ ಇಂದಿನಿಂದ ಪ್ರಸಾರವಾಗಲಿದೆ.

ಒಟಿಟಿ ಪ್ಲಾಟ್‍ಫಾರ್ಮ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಗ್‍ಬಾಸ್ ಕನ್ನಡದ ಡಿಜಿಟಲ್ ಎಕ್ಸ್’ಕ್ಲೂಸಿವ್ ಆವೃತ್ತಿ ಇದಾಗಿದ್ದು ಕಳೆದ ವರ್ಷ ಒಟಿಟಿ ಹಿಂದಿಯಲ್ಲಿ ಬಿಗ್‍ಬಾಸ್ ರಿಯಾಲಿಟಿ ಶೋ ಯಶಸ್ವಿಯಾಗಿದ್ದರಿಂದ ವೂಟ್ ಮತ್ತೊಮ್ಮೆ ತನ್ನ ಎಲ್ಲಾ ಕನ್ನಡ ವೀಕ್ಷಕರಿಗೆ ಇಂದಿನಿಂದ (ಆಗಸ್ಟ್ 6 ) ಅತಿ ಹೆಚ್ಚು ಮನರಂಜನೆಯುಳ್ಳ ಕಾರ್ಯಕ್ರಮವಾಗಿ ಬಿಗ್‍ಬಾಸ್ ರಸದೌತಣವನ್ನು ನೀಡುತ್ತಿದೆ.

ಕಾರ್ಯಕ್ರಮಕ್ಕೆ ವಿಮಲ್ ಇಲೈಚಿ ಮತ್ತು ಪೇಟಿಎಂ ಸಹ ಪ್ರಾಯೋಜಕ ಸಂಸ್ಥೆಯಾಗಿ ನಿಂತಿದೆ. ಬಿಗ್‍ಬಾಸ್ ಒಟಿಟಿ ಕನ್ನಡವು 6 ವಾರಗಳ (42 ದಿನ) ಪ್ರದರ್ಶನವಾಗುವ ಕಾರ್ಯಕ್ರಮ ಇದಾಗಿದೆ. ಶುಕ್ರವಾರವಷ್ಟೇ ಕಿಚ್ಚ ಸುದೀಪ್ ವಾಸುಕಿ ಅವರ ಜೊತೆ ಬಿಗ್ ಬಾಸ್ ಮನೆ ಪ್ರವೇಶಿಸಿ ಅಲ್ಲಿನ ವಿಶೇಷತೆಯನ್ನು ವೀಕ್ಷಕರಿಗೆ ತಿಳಿಸುವ ಪ್ರಯತ್ನ ಮಾಡಿದ್ದರು.

Comments are closed.