ಕರಾವಳಿ

ಶಾಲೆಯಿಂದ ಬರುತ್ತಿದ್ದ ಮಗುವಿಗೆ ಕಾಯುತ್ತಿದ್ದ ಮಹಿಳೆಗೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ಎಗರಿಸಿದ ಖದೀಮ..!

Pinterest LinkedIn Tumblr

ಕುಂದಾಪುರ: ಶಾಲೆ ವಾಹನದಲ್ಲಿ ಬರುತ್ತಿರುವ ಮಗುವಿಗೆ ರಸ್ತೆ ಸಮೀಪ ಕಾಯುತ್ತಿದ್ದ ಮಹಿಳೆಯೋರ್ವರಿಗೆ ವ್ಯಕ್ತಿಯೊಬ್ಬ ಮಾರಕಾಯುಧದಿಂದ ಗಂಭೀರ ಹಲ್ಲೆ ನಡೆಸಿ ಚಿನ್ನಾಭರಣ ಕದ್ದ ಘಟನೆ ಕುಂದಾಪುರ ತಾಲೂಕಿನ ಕೊರ್ಗಿ-ಹೆಸ್ಕುತ್ತೂರು ತಿರುವಿನ ಬಳಿ ಶುಕ್ರವಾರ ಸಂಜೆ ನಡೆದಿದೆ.

ಕೊರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡಿನಬೆಟ್ಟು ದೇವಕಿ (32) ಎನ್ನುವರು ತೆಕ್ಕಟ್ಟೆ- ದಬ್ಬೆಕಟ್ಟೆ ಮುಖ್ಯ ರಸ್ತೆಯ ಸಮೀಪದಲ್ಲಿ ಶಾಲಾ ವಾಹನದಲ್ಲಿ ಬರುವ ತನ್ನ ಮಗುವಿಗಾಗಿ ಕಾಯುತ್ತಿದ್ದ ಮಹಿಳೆಯ ತಲೆಗೆ ಮನಸ್ಸೋಇಚ್ಚೆ ಮಾರಕಾಯುಧದಿಂದ ಹಲ್ಲೆ ನಡೆಸಿದ ವ್ಯಕ್ತಿ ಯು ಚಿನ್ನಾಭರಣಗಳನ್ನು ಎರಗಿಸಿ ಪರಾರಿಯಾಗಿದ್ದಾ‌ನೆ‌. ಮಾರಣಾಂತಿಕ ಹಲ್ಲೆ ಪರಿಣಾಮ ಮಹಿಳೆ ಸ್ಥಿತಿ ಗಂಭೀರವಾಗಿದ್ದು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಬೈಕಿನಲ್ಲಿ ಬಂದಿದ್ದ ಆಗಂತುಕ..!
ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಘಟನೆಗೂ ಮೊದಲು ಬೈಕೊಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು ಮಹಿಳೆ ಒಂಟಿಯಾಗಿ ನಿಂತಿದ್ದು ನೋಡಿದ್ದ ಆಗಂತುಕ ಬೈಕನ್ನು ದೂರದಲ್ಲಿ ನಿಲ್ಲಿಸಿ ಬಂದು ಈ ಕೃತ್ಯ ನಡೆಸಿ ಬಳಿಕ ನಿರ್ಜನ ಕಾಡು ದಾರಿಯಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಚುಕುಕುಗೊಳಿಸಿದ್ದಾರೆ.

ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Comments are closed.