ಕರ್ನಾಟಕ

ಬಿಗ್ ಬಾಸ್ ಓಟಿಟಿ ಸೀಸನ್-1 ಮನೆಯ ಫಸ್ಟ್ ಫೋಟೋ ರಿವೀಲ್ ಮಾಡಿದ ಪರಮೇಶ್ವರ್ ಗುಂಡ್ಕಲ್

Pinterest LinkedIn Tumblr

ಬೆಂಗಳೂರು: ಕಿಚ್ಚ ಸುದೀಪ್ ನಡೆಸುವ ಬಿಗ್ ಬಾಸ್ ಓಟಿಟಿ ಸೀಸನ್-1 ಆ.6 ರಿಂದ ಪ್ರಸಾರಗೊಳ್ಳಲಿದ್ದು ವೀಕ್ಷಕರಲ್ಲಿ ಬಾರೀ ಕುತೂಹಲ ಮೂಡಿಸಿದೆ. ಬಿಗ್ ಬಾಸ್ ಮನೆಯ ಮೊದಲನೆಯ ತುಣುಕನ್ನು ಇಂದು (ಆ.4) ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್‌ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ‘ಓವರ್ ದಿ ಟಾಪ್’ ಎಂಬ ಶಿರ್ಷಿಕೆ ಜೊತೆಗೆ ಈ ಫೋಟೋ ವೈರಲ್ ಮಾಡಿದ್ದು ಬಿಗ್ ಬಾಸ್ ಅಭಿಮಾನಿಗಳು ಇನ್ನಷ್ಟು ಕೌತುಕರಾಗಿದ್ದಾರೆ.

ಈ ಹಿಂದೆ ಬಿಡುಗಡೆಯಾದ ಬಿಗ್ ಬಾಸ್ ಪ್ರೊಮೊ ವಿಡಿಯೋ ಅಭಿಮಾನಿಗಳ ಕುತೂಹಲ ಹಾಗೂ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು ಎಲ್ಲೆಡೆ ವೈರಲ್ ಆಗಿತ್ತು.

https://www.instagram.com/p/Cg1QOShh_4A/?igshid=MDJmNzVkMjY=

ಈ ಬಾರಿ ವೂಟ್ ಆಪ್ ನಲ್ಲಿ ದಿನದ 24 ಗಂಟೆಯೂ ಬಿಗ್ ಬಾಸ್ ಮನೆಯ ದೃಶ್ಯಾವಳಿಗಳನ್ನು ವೀಕ್ಷಿಸಬಹುದಾಗಿದೆ. ಮನೆಯಲ್ಲಿ ನಡೆಯುವ ಘಟನೆಗಳಿಗೂ ಪ್ರಸಾರಕ್ಕೂ ಕೇವಲ ಎರಡು ನಿಮಿಷಗಳ ಅಂತರವಿರಲಿದೆಯಷ್ಟೇ. ಬಿಗ್ ಬಾಸ್ ಒಟಿಟಿಯಲ್ಲಿ ವಿನ್ನರ್ ಇರಲ್ಲ, ಎಲ್ಲರೂ ವಿನ್ನರ್ಸ್ ಆಗಿರುತ್ತಾರೆ. ಪ್ರತೀ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಮಾತುಕತೆ ನಡೆಸಲಿದ್ದಾರೆ. ಒಟ್ಟು 6 ವಾರಗಳ ಕಾಲ ಅಂದರೆ 42 ದಿನ ಈ ಶೋ ನಡೆಯಲಿದೆ.

 

Comments are closed.