ಕರಾವಳಿ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಹಲವು ಶಂಕಿತರು ಪೊಲೀಸ್ ವಶಕ್ಕೆ, ತೀವೃ ವಿಚಾರಣೆ

Pinterest LinkedIn Tumblr

ಪುತ್ತೂರು: ಮಂಗಳವಾರ ರಾತ್ರು ನಡೆದ ಪ್ರವೀಣ್‌ ನೆಟ್ಟಾರು ಹತ್ಯೆ ಸಂಬಂಧ ಏಳು ಮಂದಿ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಅಕ್ಷಯ ಚಿಕನ್‌ ಸೆಂಟರ್‌ ನಲ್ಲಿ ಕೆಲಸ ಮಾಡುತ್ತಿರುವ ಮಧು ರಾಯನ್‌ ಅವರು ನೀಡಿದ ದೂರಿನಂತೆ ಕೃತ್ಯವೆಸಗಿದ ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಲಾಗಿದೆ. ಮೂವರು ಕೇರಳ ಮೂಲದವರು ಎಂದು ಶಂಕಿಸಲಾಗಿದೆ.

ಮಂಗಳವಾರ ರಾತ್ರಿ ಪ್ರವೀಣ್‌ ಕೋಳಿ ಅಂಗಡಿ ಬಳಿ ಮೂವರು ಅಪರಿಚಿತರು ಬೈಕ್‌ ನಲ್ಲಿ ಬಂದು ಪ್ರವೀಣ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಗಂಭೀರ ಗಾಯೊಗೊಂಡಿದ್ದ ಪ್ರವೀಣ್‌ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

 

Comments are closed.