ಕರಾವಳಿ

ಕೊಚ್ಚಿಹೋದ ಬೈಂದೂರು ಸೂರ್ಕುಂದ-ಕಲ್ಮಕ್ಕಿ ರಸ್ತೆ, ಸಂಪರ್ಕ ಕಡಿತ; ಶಾಸಕ ಸುಕುಮಾರ ಶೆಟ್ಟಿ ಭೇಟಿ

Pinterest LinkedIn Tumblr

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ, ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಸೂರಕುಂದ ಸಮೀಪದ ಕಲ್ಮಕ್ಕಿಯಲ್ಲಿ ಭಾರಿ ಮಳೆಗೆ ರಸ್ತೆಗೆ ಅಳವಡಿಸಿದ್ದ ಮೋರಿ ಕುಸಿದು ಸಂಪರ್ಕ ರಸ್ತೆ ಹೊಳೆಯ ಪಾಲಾಗಿದ್ದು ಹಲವಾರು ಮನೆಗೆ ಸಂಪರ್ಕವೇ ಇಲ್ಲದಂತಾಗಿದೆ.

ಕೃಷಿ ಹಾಗೂ ಹೈನುಗಾರಿಕೆ ನೆಚ್ಚಿಕೊಂಡ 30ಕ್ಕೂ ಅಧಿಕ ಮನೆಗಳಿದ್ದು ರಸ್ತೆ ಸಂಪರ್ಕವಿಲ್ಲದ್ದರಿಂದ ಸೋಮವಾರ ಹಲವು ಲೀಟರ್ ಹಾಲು ಹಾಳಾದ ಘಟನೆ ನಡೆಯಿತು. ಇನ್ನು ಎರಡು ಊರುಗಳ ನಡುವಿನ ಸಂಪರ್ಕವೂ ಇಲ್ಲದಂತಾಗಿದೆ. ರಸ್ತೆ ಮದ್ಯೆ ಬೃಹತ್ ಗಾತ್ರದ ಕಂದಕವೇ ನಿರ್ಮಾಣವಾಗಿದೆ.

ಈ ಪ್ರದೇಶಕ್ಕೆ ಬೈಂದೂರಿನ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಆಗಮಿಸಿ ಸ್ಥಳೀಯರ ಸಮಸ್ಯೆ ಆಲಿಸಿದರು. ಪಟ್ಟಣ ಪಂಚಾಯತ್ ಇಂಜಿನಿಯರ್ ಅವರಲ್ಲಿ ಅಂದಾಜು ಪಟ್ಟಿ ಸಿದ್ದಪಡಿಸಲು ಸೂಚಿಸಿದ್ದು ತಕ್ಷಣಕ್ಕೆ ತುರ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರ ಜೊತೆಯಲ್ಲಿ ಜಿ.ಪಂ ಮಾಜಿ ಸದಸ್ಯ ಶಂಕರ್ ಪೂಜಾರಿ, ಸುಕುಮಾರ್ ಸುರ್ಕುಂದ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಖಂಡ ಜೈಸನ್ ಮದ್ದೋಡಿ, ಸಮಾಜ ಸೇವಕ ಸುಬ್ರಮಣ್ಯ ಬಿಜೂರ್, ರಾಜೇಶ್ ಬಡಾಕೆರೆ ಮೊದಲಾದವರು ಇದ್ದರು.

Comments are closed.