ಕರಾವಳಿ

ಅಮಾಸೆಬೈಲು: ಮೆಸ್ಕಾಂನ ಅಲ್ಯೂಮಿನಿಯಂ ವಾಹಕ, ಶೆಡ್’ನ ಪಂಪುಸೆಟ್ ಕಳವು; 24 ಗಂಟೆಯೊಳಗೆ ಮೂವರ ಬಂಧನ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಮೆಸ್ಕಾಂ‌ ಇಲಾಖೆಯ ಕಂಬಗಳನ್ನು ತುಂಡರಿಸಿ ಅಲ್ಯೂಮಿನಿಯಂ ವಾಹಕ, ಪಂಪು ಸೆಟ್ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಕೃತ್ಯ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಅಮಾಸೆಬೈಲು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಶೋಕ್ ನಾಯ್ಕ (22), ಮೂರ್ತಿ ನಾಯ್ಕ (38), ಮೊಹಿದ್ದಿನ್ ಕೆ ಎಸ್ (48) ಬಂಧಿತ ಆರೋಪಿಗಳು.

ಘಟನೆ ವಿವರ: ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ಕುಂದ ಬಳಿ ಮೆಸ್ಕಾಂ ಇಲಾಖೆಯ 4 ಕಂಬಗಳನ್ನು ತುಂಡು ಮಾಡಿ ಅಲ್ಯೂಮಿನಿಯಂ ವಾಹಕಗಳನ್ನು ಹಾಗೂ ಅಲ್ಲಿಯೇ ಶೆಡ್ ನಲ್ಲಿದ್ದ ಪಂಪುಸೆಟ್ ಕಳವು ಮಾಡಲಾಗಿತ್ತು. ಈ ಬಗ್ಗೆ ಅಮಾಸೆಬೈಲು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡ ಪೊಲೀಸರ ತಂಡ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದೆ. ಅವರಿಂದ ಕಳವು ಮಾಡಿದ ಸೊತ್ತುಗಳು, ಕೃತ್ಯಕ್ಕೆ ಉಪಯೋಗಿಸಿದ ಎರಡು ಮೋಟಾರ್ ಸೈಕಲ್ ವಶಕ್ಕೆ ಪಡೆಯಲಾಗಿದ್ದು ಈ ವಸ್ತುಗಳ ಒಟ್ಟು ಮೌಲ್ಯ ರೂಪಾಯಿ 90 ಸಾವಿರ ರೂ. ಆಗಿದೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಟಿ. ಸಿದ್ದಲಿಂಗಪ್ಪ ಹಾಗೂ ಕುಂದಾಪುರ ಉಪವಿಭಾಗದ ಪೋಲೀಸ್ ಉಪಾಧೀಕ್ಷಕ ಶ್ರೀಕಾಂತ್. ಕೆ ನಿರ್ದೇಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಅಮಾಸೆಬೈಲು ಠಾಣೆ ಪಿಎಸ್ಐ ಸುಬ್ಬಣ್ಣ ಬಿ. ಮತ್ತು ಅವರ ತಂಡ ಆರೋಪಿಗಳನ್ನು ಬಂಧಿಸಿದೆ. ಅಮಾಸೆಬೈಲು ಠಾಣಾ ಎಎಸ್ಐ ಉಮೇಶ್ ನಾಯ್ಕ್, ಎಎಸ್ಐ ಗೋವಿಂದರಾಜು , ಹೆಡ್ ಕಾನ್ಸ್‌ಟೇಬಲ್ ಗಳಾದ ಕೃಷ್ಣ, ಸೂರ ನಾಯ್ಕ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ನವೀನ್, ಶರತ್, ಪ್ರದೀಪ್ ಶೆಟ್ಟಿ ಹಾಗೂ ಚಾಲಕ ಪ್ರಕಾಶ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Comments are closed.