ಕರಾವಳಿ

ಇನ್ನೋವಾ ಕಾರು-ಸ್ಕೂಟರ್‌ ಢಿಕ್ಕಿ; ನಂದಳಿಕೆಯ ಸಹೋದರರಿಬ್ಬರು ದಾರುಣ ಸಾವು

Pinterest LinkedIn Tumblr

ಉಡುಪಿ: ಇನ್ನೋವಾ ಕಾರು-ಸ್ಕೂಟರ್‌ ಢಿಕ್ಕಿ ಹೊಡೆದ ಪರಿಣಾಮ ಸಹೋರರಿಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ ನಂದಳಿಕೆ ಮಾವಿನಕಟ್ಟೆಯ ಬಳಿ ನಡೆದಿದೆ.

ನಂದಳಿಕೆಯ ನಿವಾಸಿಗಳಾದ ಸತೀಶ್ ಕುಲಾಲ್(28) ಹಾಗೂ ಸಂದೀಪ್ ಕುಲಾಲ್ ಮೃತ ದುರ್ದೈವಿಗಳು.

ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರ್ಕಳ ಕಡೆಗೆ ಪ್ರಯಾಣಿಸುತ್ತಿದ್ದ ಇನೋವಾ ಕಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಪರಿಣಾಮ ಸಂದೀಪ್ ಸ್ಥಳದಲ್ಲಿಯೇ ಮೃತ ಪಟ್ಟರೆ, ಸತೀಶ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಸಂದೀಪ್ ಅವಿವಾಹಿತರಾಗಿದ್ದು, ಸತೀಶ್ ಅವರಿಗೆ ವರ್ಷದ ಹಿಂದೆಯಷ್ಟೇ ವಿವಾಹವಾಗಿತ್ತು ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.