ಕರಾವಳಿ

ಮಳೆಯಿಂದ ಕುಸಿದ ಉಪ್ಪುಂದ ಅಮ್ಮನವರ ತೊಪ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಭೇಟಿ

Pinterest LinkedIn Tumblr

ಕುಂದಾಪುರ: ಸತತ ಮಳೆಯಿಂದಾಗಿ ಮೇಲ್ಚಾವಣಿ ಹಾಗೂ ಗೋಡೆ ಕುಸಿದ ಬೈಂದೂರು ತಾಲೂಕಿನ ಉಪ್ಪುಂದ ಗ್ರಾ.ಪಂ ವ್ಯಾಪ್ತಿಯ ಅಮ್ಮನವರ ತೊಪ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 60 ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದು ಇತ್ತೀಚೆಗೆ ನಿರ್ಮಾಣವಾದ ಕೊಠಡಿಯಲ್ಲಿ ಮಳೆಗಾಲದಲ್ಲಿ ಆ ವಿದ್ಯಾರ್ಥಿಗಳನ್ನು ಕೂರಿಸಲಾಗುತ್ತಿತ್ತು. ಶಿಥೀಲಾವಸ್ತೆಯಲ್ಲಿರುವ ಕಟ್ಟಡ ಕಳೆದ ಮೂರು ವರ್ಷಗಳಿಂದ ಬಳಕೆ ಮಾಡುತ್ತಿಲ್ಲ. ಈ ಕಟ್ಟಡವನ್ನು ಇಂಜಿನಿಯರ್ ಮೂಲಕ ನೆಲಸಮ ಮಾಡಿ ನೂತನ ಕೊಠಡಿಗೆ ಬೇಡಿಕೆ ಇಡಬೇಕಿತ್ತು. ಮುಂದಿನ ದಿನದಲ್ಲಿ ಹೆಚ್ಚಿನ ಕೊಠಡಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭ‌ ಉಡುಪಿ ಜಿ.ಪಂ ಸಿಇಒ ಪ್ರಸನ್ನ ಎಚ್, ಬೈಂದೂರು ತಹಶಿಲ್ದಾರ್ ಕಿರಣ ಗೌರಯ್ಯ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಉಪ್ಪುಂದ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀ ಮೊದಲಾದವರು ಇದ್ದರು.

 

Comments are closed.