ಕರ್ನಾಟಕ

ಅಮರನಾಥ ಯಾತ್ರೆ; ಕರ್ನಾಟಕದ ಯಾತ್ರಾರ್ಥಿಗಳು ಸುರಕ್ಷಿತ: ಸಿಎಂ ಬಸವರಾಜ ಬೊಮ್ಮಾಯಿ

Pinterest LinkedIn Tumblr

ಬೆಂಗಳೂರು: ಜಮ್ಮು-ಕಾಶ್ಮೀರದ ಅಮರನಾಥ ಗುಹೆ ಬಳಿ ಮೇಘಸ್ಫೋಟ ಹಿನ್ನೆಲೆ ನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿವರ್ಷ ಕನ್ನಡಿಗರು ಯಾತ್ರೆಗೆ ಹೋಗುತ್ತಾರೆ. ರಾಜ್ಯದ ನೂರಕ್ಕೂ ಹೆಚ್ಚು ಜನರು ಯಾತ್ರೆಗೆ ತೆರಳಿದ‌ ಮಾಹಿತಿಯಿದೆ. ಯಾತ್ರೆಗೆ ಹೋದ ಬಹುತೇಕ ಎಲ್ಲರೂ ಸುರಕ್ಷಿತವಾಗಿದ್ದಾರೆ. ಬೇರೆ ಯಾವುದೇ ರೀತಿ ಅಹಿತಕರ ಘಟನೆಗಳ ಸುದ್ದಿ ಇಲ್ಲ. ರಾಜ್ಯ ಸರ್ಕಾರದಿಂದ ಹೆಲ್ಪ್​​ಲೈನ್​ ಆರಂಭಿಸಲಾಗಿದೆ. ಹೆಲ್ಪ್‌ಲೈನ್​ಗೆ 15-20 ಜನ ಈಗಾಗಲೇ ಕರೆ ಮಾಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಕೇಂದ್ರದ ಜತೆ ಸಂಪರ್ಕ ಹೊಂದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

ಇನ್ನೂ ರಾಜ್ಯದ ಹಲವೆಡೆ ಭಾರೀ ಮಳೆಯಿಂದಾಗಿ ಅವಾಂತರ ಹಿನ್ನೆಲೆ ಪ್ರತಿಕ್ರಿಯಿಸಿದ್ದು, ಮಳೆ ಹಾನಿ ಬಗ್ಗೆ ನಿನ್ನೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ರಾಜ್ಯದ ಕೆಲವು ಭಾಗಗಳಲ್ಲಿ ಸ್ವಲ್ಪ ಮಳೆ ಕಡಿಮೆಯಾಗಿದೆ. ಇನ್ನೂ ಕೆಲವೆಡೆ 2-3 ದಿನ ಮಳೆಯಾಗುವ ಸಾಧ್ಯತೆ ಇದೆ. ಅಗತ್ಯ ಕಾರ್ಯಾಚರಣೆ ಮಾಡಲಾಗುತ್ತಿದೆ.

ರಾಜ್ಯ ಸರ್ಕಾರದಿಂದ ಹೆಲ್ಪ್‌ಲೈನ್ ನಂಬರ್ ಬಿಡುಗಡೆ….
ಮೇಘ ಸ್ಫೋಟದಿಂದ ಹಲವು ಯಾತ್ರಿಕರು ಕೊಚ್ಚಿ ಹೋಗಿದ್ದಾರೆ. ಕರ್ನಾಟಕದ ಯಾತ್ರಿಕರ ಸಂಪರ್ಕಿಸಲು ರಾಜ್ಯ ಸರ್ಕಾರ ಹೆಲ್ಪ್‌ಲೈನ್ ನಂಬರ್ ಬಿಡುಗಡೆ ಮಾಡಿದೆ. 080-1070, 22340676 ಸಂಖ್ಯೆಗೆ ಫೋನ್‌ ಮಾಡಬಹುದು. Email: revenuedmkar@gmail.comಗೆ ಸಂಪರ್ಕಿಸಬಹುದಾಗಿದೆ. ಕಾಶ್ಮೀರ ವಿಭಾಗದ ಹೆಲ್ಪ್‌ಲೈನ್ ಸಂಖ್ಯೆ-0194-2496240 ಅಮರನಾಥ ದೇಗುಲದ ಹೆಲ್ಪ್‌ಲೈನ್ ಸಂಖ್ಯೆ-0194-2313149 ಎನ್‌ಡಿಆರ್‌ಎಫ್‌-011-23438252, 011-23438253 ಸಂಪರ್ಕಿಸಬಹುದು.

 

Comments are closed.