ಕರಾವಳಿ

ಕರಾವಳಿಯಲ್ಲಿ ಹೆಚ್ಚಿದ ಕಡಲಬ್ಬರ; ಮರವಂತೆಯಲ್ಲಿ ಕಡಲ್ಕೊರೆತ, ತೆಂಗಿನ ಮರಗಳು ಸಮುದ್ರ ಪಾಲು..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರವಂತೆಯಲ್ಲಿ ಕಡಲ್ಕೊರೆತ ತೀವೃಗೊಂಡಿದ್ದು ತೀರ ನಿವಾಸಿಗಳಲ್ಲಿ ಆತಂಕ ಹೆಚ್ಚಿದೆ.

ಮರವಂತೆಯ ಕರಾವಳಿ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕಡಲಬ್ಬರ ಹೆಚ್ಚಿದ್ದು ಇಲ್ಲಿನ ಫಿಶರೀಸ್ ರಸ್ತೆಯಲ್ಲಿ ಈವರೆಗೆ ನೂರಾರು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಕಡಲ್ಕೊರೆತ ತಡೆಗೆ ಹಾಕಲಾದ ಬೃಹತ್ ಕಲ್ಲು ಬಂಡೆಗಳು ಜಾರುತ್ತಿದ್ದು ನಿವಾಸಿಗರು ಆತಂಕದಿಂದ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ಮೀನುಗಾರ ವಾಸುದೇವ ಖಾರ್ವಿ ತಿಳಿಸಿದ್ದಾರೆ ವೈಜ್ಞಾನಿಕ ಮಾದರಿ‌ ಕಾಮಗಾರಿ ನಡೆಸಿದರೆ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಸಾಧ್ಯ ಎಂದು ಮೀನುಗಾರರು ತಿಳಿಸಿದ್ದಾರೆ.

ಕಡಲಬ್ಬರ ಇನ್ನು ಜಾಸ್ತಿಯಾದಲ್ಲಿ ಇನ್ನಷ್ಟು ತೆಂಗಿನ ಮರಗಳು ಸಹ ಕುಸಿಯುವ ಭೀತಿ ಎದುರಾಗಿದೆ. ಬಲೆ, ಇನ್ನಿತರ ಪರಿಕರಗಳನ್ನು ಇಟ್ಟಿರುವ ಮೀನುಗಾರರ ಶೆಡ್‌ಗಳಿಗೂ ಅಪಾಯವಿದೆ. ಅಪಾಯದ ಭೀತಿಯಲ್ಲಿ ಮೀನುಗಾರಿಕಾ ರಸ್ತೆಯಾಚೆಗಿನ ಅನೇಕ ಮನೆಗಳಿದೆ. ಇಲ್ಲಿಗೆ ಸಮೀಪದಲ್ಲಿ ರಸ್ತೆಯೂ ಕೊಚ್ಚಿಹೋಗುವ ಭೀತಿಯಿದ್ದು ಸಮುದ್ರದ ದೈತ್ಯ ಅಲೆಗಳು ರಸ್ತೆಗೆ‌ ಅಪ್ಪಳಿಸುತ್ತಿದೆ. ಈ ಭಾಗದ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಅಪಾಯದ ನಡುವೆ ಸಾಗಬೇಕಾದ ಸ್ಥಿತಿ ಎದುರಾಗಿದೆ.‌ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ಈವರೆಗೆ ಸ್ಥಳಕ್ಕೆ ಬಾರದ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಸ್ಥಳೀಯ‌ ಮೀನುಗಾರರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

 

Comments are closed.