ಕರಾವಳಿ

ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು; ಕುಂದಾಪುರದ ಕೆರಾಡಿಯಲ್ಲಿ ಘಟನೆ

Pinterest LinkedIn Tumblr

ಕುಂದಾಪುರ: ಗದ್ದೆಯಲ್ಲಿ ಕೃಷಿ‌ ಕೆಲಸ ಮಾಡುತ್ತಿರುವಾಗಲೇ‌ ವ್ಯಕ್ತಿಯೊಬ್ಬರು ಕುಸಿದುಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ದೀಟಿ ಎಂಬಲ್ಲಿ ಜೂ.29 ರಂದು ನಡೆದಿದೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹಳೆ ಹರಲಿಪುರ ಗ್ರಾಮದ ನಿವಾಸಿ, ಪ್ರಸ್ತುತ ಕುಂದಾಪುರ ವಂಡ್ಸೆಯಲ್ಲಿರುವ ಕಾಂತುರಾಜು (40) ಮೃತ ವ್ಯಕ್ತಿ. ಹೃದಯ‌ ಸಂಬಂಧಿ ಸಮಸ್ಯೆಯಿಂದ ಅವರು ಮೃತಪಟ್ಟ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಘಟನೆ ವಿವರ: ಕೆರಾಡಿ ಗ್ರಾಮದ ದೀಟಿ ಎಂಬಲ್ಲಿ ಸ್ಥಳೀಯ ನಿವಾಸಿಯೊಬ್ಬರು ಕೃಷಿ ಮಾಡಲು ಗದ್ದೆಯನ್ನು ಗೇಣಿ ಪಡೆದುಕೊಂಡು ಗದ್ದೆ ಉಳುಮೆ ಮಾಡಲು ಬೆಳ್ಳಾಲದವರೊಬ್ಬರಿಂದ ಟ್ರಾಕ್ಟರ್‌ನ್ನು ಪಡೆದಿದ್ದು ಅದರ ಚಾಲಕ ಕಾಂತುರಾಜು ಗದ್ದೆ ಉಳುಮೆ ಮಾಡಲು ಟ್ರಾಕ್ಟರ್‌ನ್ನು ಓಡಿಸುತ್ತಿದ್ದರು. ಈ ವೇಳೆ ನಾಲ್ಕೈದು ಮಂದಿ ಅವರ ಜೊತೆಗೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು ಊಟದ ಸಮಯದಲ್ಲಿ ಕೆಲಸ ನಿಲ್ಲಿಸಿದ್ದು ಕಾಂತರಾಜು ಟ್ರಾಕ್ಟರ್‌ನ್ನು ಪಕ್ಕಕ್ಕಿಟ್ಟು ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದಾಗ ಕುಸಿದು ಬಿದ್ದು ಅಸ್ವಸ್ಥರಾಗಿದ್ದು ಸ್ಥಳದಲ್ಲಿದ್ದವರು ಖಾಸಗಿ ಅಂಬುಲೆನ್ಸ್‌ ನಲ್ಲಿ ಚಿಕಿತ್ಸೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ. ಮೃತ ಕಾಂತುರಾಜು  ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿದಾಗ ಕುಸಿದು ಬಿದ್ದು ಹೃದಯ ಸಂಬಂಧಿ ಸಮಸ್ಯೆಯಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಕೊಲ್ಲೂರು‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.