ಕರಾವಳಿ

ಬೈಂದೂರು ಬಿಜೆಪಿ ಸದೃಢವಾಗಿದೆ: ‘ವಿಕಾಸ ತೀರ್ಥ’ ಬೃಹತ್ ಬೈಕ್ ರ್‍ಯಾಲಿಯಲ್ಲಿ ಶಾಸಕ‌ ಬಿ.ಎಂ ಸುಕುಮಾರ ಶೆಟ್ಟಿ

Pinterest LinkedIn Tumblr

ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ 8 ವರ್ಷಗಳ ಯಶಸ್ವಿ ಆಡಳಿತವನ್ನು ಪೂರೈಸಿದ ಹಿನ್ನೆಲೆಯಲ್ಲಿ ಬೈಂದೂರು ಮಂಡಲದ ಬಿಜೆಪಿ ಯುವ ಮೋರ್ಚಾದ ವತಿಯಿಂದ ‘ವಿಕಾಸ ತೀರ್ಥ’ ಬೃಹತ್ ಬೈಕ್ ರ್‍ಯಾಲಿ ನಡೆಯಿತು.

ರ್‍ಯಾಲಿಗೆ ಚಾಲನೆ ನೀಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಕೇಂದ್ರದ ಸಾಧನೆ ತಿಳಿಸುವ ಸಲುವಾಗಿ ದೇಶಾದ್ಯಂತ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಯಶಸ್ವಿ ಬೈಕ್ ರ್‍ಯಾಲಿ ನಡೆದಿದೆ. 8 ವರ್ಷಕ್ಕಿಂತ ಮೊದಲು ದೇಶದ ಆಡಳಿತ ಹೇಗಿತ್ತು, ಮೋದಿ ಪ್ರಧಾನಿ ಅದ ಬಳಿಕ ಹೇಗಿದೆ ಅನ್ನುವುದಕ್ಕೆ ಇಂದು ಇಡೀ ವಿಶ್ವವೇ ದೇಶದತ್ತ ತಿರುಗಿ ನೋಡುತ್ತಿರುವುದು ಸಾಕ್ಷಿ. ನಿಜಾರ್ಥದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅನ್ನುವಂತೆ ದೇಶ ಮುನ್ನಡೆಯುತ್ತಿದೆ ಎಂದರು.

ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಸಮಾಜದ ಪ್ರತಿಯೊಬ್ಬರಿಗೂ ತಿಳಿಯಪಡಿಸುವಂತಹ ಕಾರ್‍ಯಕ್ರಮ ಇದಾಗಿದೆ. ಬೈಂದೂರು ಮಂಡಲದ ಎಲ್ಲ ಮೋರ್ಚಾಗಳು ಅತ್ಯುತ್ತಮವಾಗಿ ಕಾರ್‍ಯಕ್ರಮಗಳನ್ನು ಮಾಡುತ್ತ ಜಿಲ್ಲೆಯಲ್ಲಿಯೇ ಮಾದರಿಯಾಗಿದೆ. ಬೈಂದೂರು ಬಿಜೆಪಿ ಸದೃಢವಾಗಿದೆ ಎಂದವರು ಹೇಳಿದರು.
ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮೊದಲಾದವರು ಮಾತನಾಡಿದರು.

ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಪ್ರಧಾನ ಕಾರ್‍ಯದರ್ಶಿಗಳಾದ ವಿನೋದ್ ಶಾಂತಿನಿಕೇತನ, ಶರತ್ ಶೆಟ್ಟಿ ಉಪ್ಪುಂದ, ರಾಜ್ಯ ಬಿಜೆಪಿ ಯುವಮೋರ್ಚಾ ಕಾಯ ಕರಣಿ ಸದ್ಯಸ ಪ್ರಜ್ವಲ್ ಶೆಟ್ಟಿ ,ಮಂಡಲ ಯುವ ಮೋರ್ಚಾ ಅಧ್ಯಕ್ಷ ಸಂತೋಷ್, ಪ್ರಧಾನ ಕಾರ್ಯದರ್ಶಿ ಅನುರ ಮೆಂಡನ್ ಪ್ರಮುಖರಾದ ಬಾಬು ಹೆಗ್ಡೆ ತಗ್ಗರ್ಸೆ, ಸದಾನಂದ ಉಪ್ಪಿನಕುದ್ರು, ಪ್ರಕಾಶ್ ಜಡ್ಡು ,ಪ್ರಿಯದರ್ಶಿನಿ ದೇವಾಡಿಗ, ಶ್ಯಾಮಲಾ ಕುಂದರ್, ವಿವಿಧ ಮೋರ್ಚಾಗಳ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಲ್ಲೂರಿನ ರಾಷ್ಟ್ರೀಯ ಹೆದ್ದಾರಿಯಿಂದ ಆರಂಭಗೊಂಡ ಬೈಕ್ ರ್‍ಯಾಲಿಯು ಹೆಮ್ಮಾಡಿ, ಮರವಂತೆ, ಉಪ್ಪುಂದ ಮೂಲಕವಾಗಿ ಬೈಂದೂರು ಪೇಟೆಯವರೆಗೆ ಸುಮಾರು 30 ಕಿ.ಮೀ. ಸಾಗಿ, ಸಮಾಪನಗೊಂಡಿತು.

Comments are closed.