ಕರ್ನಾಟಕ

ನೀಳ ದಂತಗಳಿಂದ ಪ್ರಖ್ಯಾತವಾಗಿದ್ದ ಗಜರಾಜ ‘ಕಬಿನಿ ಶಕ್ತಿಮಾನ್’ ಭೋಗೇಶ್ವರ್ ಇನ್ನಿಲ್ಲ

Pinterest LinkedIn Tumblr

ಮೈಸೂರು: ಕಬಿನಿ ಶಕ್ತಿಮಾನ್ ಎಂದೇ ಪ್ರಖ್ಯಾತಿ ಪಡೆದಿದ್ದ ನೀಳ ದಂತದ, ಗಜ ಗಾಂಭೀರ್ಯ ಸುಂದರ ನಡಿಗೆಯ ಭೋಗೇಶ್ವರ ಹೆಸರಿನ ಆನೆ ಇಂದು ನಿಧನ ಹೊಂದಿದೆ.

ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಕಳೆಬರಹ ಪತ್ತೆಯಾಗಿದ್ದು, ಕಬಿನಿ ಹಿನ್ನಿರಿನಲ್ಲಿ ಪ್ರವಾಸಿಗರಿಗೆ ಮುದ ನೀಡುತ್ತಿದ್ದ ಭೋಗೇಶ್ವರ ವಯೋಸಹಜ ನಿಧನ ಹೊಂದಿದೆ. ಕಬಿನಿಯ ಹಿರಿಯಣ್ಣನಿಗೆ 60 ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು.

ಸುಮಾರು 4 ಅಡಿಗೂ ಉದ್ದದ ನೀಳ ದಂತ, ಸುಂದರ ನಡಿಗೆ ಮೂಲಕವೇ ಪ್ರಾಣಿ ಪ್ರೀಯರ ಮನಗೆದ್ದಿದ್ದ ಕಾಡಾನೆ ಇದಾಗಿತ್ತು. ಭೋಗೇಶ್ವರ ಆನೆಯನ್ನು ನೋಡಿ ಪ್ರವಾಸಿಗರು ಬಹಳಷ್ಟು ಖುಷಿ ಪಡುತ್ತಿದ್ದರು. ಎಲ್ಲರ ಫೇವರೇಟ್ ಆನೆಯಾಗಿದ್ದ ಭೋಗೇಶ್ವರ ಸೌಂದರ್ಯಕ್ಕೆ ಜನರು ಮಾರು ಹೋಗಿದ್ದರು. ಈ ಗಜರಾಜನ ಗಾಂಭೀರ್ಯದ ನಡಿಗೆ ಆಕರ್ಷಣೀಯ ಕೇಂದ್ರಬಿಂದು ಆಗಿತ್ತು. ಇದೀಗ ಆನೆ ಸಾವನಪ್ಪಿದ್ದು ಪ್ರಾಣಿಪ್ರಿಯರಲ್ಲಿ ಬೇಸರ ಮನೆಮಾಡಿದೆ.

Comments are closed.