ಕರಾವಳಿ

ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಶತಚಂಡಿಕಾ ಯಾಗದಲ್ಲಿ ಡಿ.ಕೆ.ಶಿ ಭಾಗಿ; ತುಳುವಿನಲ್ಲಿ ಬರೆದುಕೊಂಡ ಶಿವಕುಮಾರ್

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ರಾಜಗೋಪುರ ಸಮರ್ಮಣಾ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಶತಚಂಡಿಯಾಗದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗಿಯಾದರು.

ಉದ್ಯಮಿ ಯು.ಬಿ ಶೆಟ್ಟಿ ಹಾಗೂ ಕುಟುಂಬಿಕರು ಯು.ಬಿ.ಎಸ್. ಚಾರಿಟೇಬಲ್ ಟ್ರಸ್ಟ್ ಮೂಲಕವಾಗಿ ನಡೆಸುತ್ತಿರುವ ಕಾರ್ಯಕ್ರಮ ಇದಾಗಿದ್ದು ಯು.ಬಿ ಶೆಟ್ಟಿಯವರ ಆತ್ಮೀಯರಾಗಿರುವ ಡಿಕೇಶಿಯವರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಯು.ಬಿ ಶೆಟ್ಟಿ ಕುಟುಂಬದವರು ಬರಮಾಡಿಕೊಂಡರು.

ಕಾರ್ಯಕ್ರಮ ಉದ್ಯಮಿ ಸೀತಾರಾಂ ಶೆಟ್ಟಿ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವರು ಈ ಸಂದರ್ಭ ಇದ್ದರು.

ಇನ್ನು ಈ ಬಗ್ಗೆ ತನ್ನ ಅಧೀಕೃತ ಫೇಸ್ಬುಕ್ ಖಾತೆಯಲ್ಲಿ ತುಳುವಿನಲ್ಲಿ ಡಿ.ಕೆ ಶಿವಕುಮಾರ್ ಬರೆದುಕೊಂಡಿದ್ದು ‘ಇನಿ ಬೈಂದೂರು ತಾಲೂಕುದ ಉಪ್ಪುಂದಡ್‌ ಇಪ್ಪುನ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಾಸ್ಥಾನಡ್‌ ಯು.ಬಿ.ಎಸ್‌ ಚಾರೀಟೇಬಲ್‌ ಟ್ರಸ್ಟ್‌ ಕಡೆರ್ದ್‌ ಪೊಸ ರಾಜಗೋಪುರ ಸಮರ್ಪಣೆ ಬೊಕ್ಕ ಶತ ಚಂಡಿಕಾ ಯಾಗ ಪೂರ್ಣಾಹುತಿ ಯಾಗನ್‌ ಮಲ್ತಿತ್ತೆರ್‌. ಆ ಕಾರ್ಯಕ್ರಮೊಡ್‌ ಯಾನ್ಲ ಪೋದು ಅಪ್ಪೆ ದುರ್ಗಾಪರಮೇಶ್ವರ್‌ನ ಆರ್ಶೀವಾದ ದೆತೊಂಡೆ. ನಿಕುಲು ಕೊರ್ನ ಪ್ರೀತಿಗ್‌ ಮಸ್ತ್‌ ಸೊಲ್ಮೆಲು’ ( ಇಂದು ಬೈಂದೂರು ತಾಲೂಕಿನ ಉಪ್ಪುಂದದಲ್ಲಿರುವ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯು.ಬಿ.ಎಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ನಿರ್ಮಿಸಿದ ನೂತನ ರಾಜಗೋಪುರದ ಸಮರ್ಪಣೆ ಹಿನ್ನೆಲೆ ಶತ ಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಘೊಂಡು ತಾಯಿ ಆಶಿರ್ವಾದ ಪಡೆದೆ. ನೀವು ಕೊಟ್ಟ ಪ್ರೀತಿಗೆ ಋಣಿ) ಎಂದಿದ್ದಾರೆ.

(ಚಿತ್ರ ಕೃಪೆ: ಡಿಕೆ‌ಶಿವಕುಮಾರ್ ಆಪೀಶಿಯಲ್ ಫೇಸ್ಬುಕ್ ಪೇಜ್)

Comments are closed.