ಕರಾವಳಿ

ಉಡುಪಿಯಲ್ಲಿ ಖಾಸಗಿ ಬಸ್ ಪಲ್ಟಿ; 20 ಪ್ರಯಾಣಿಕರಿಗೆ ಗಾಯ, ಬಸ್ ಸಂಪೂರ್ಣ ನಜ್ಜುಗುಜ್ಜು

Pinterest LinkedIn Tumblr

ಉಡುಪಿ: ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿರುವ ಘಟನೆ ಉದ್ಯಾವರದ ಬಲಾಯಿಪಾದೆ ಬಳಿ ನಡೆದಿದೆ.

ಬಲಾಯಿಪಾದೆಯ ಬಳಿ ಬ್ಯಾರಿಕೇಡ್ ದಾಟುವಾಗ ಡಿವೈಡರ್ ಮೇಲೆ ಖಾಸಗಿ ಎಕ್ಸ್ ಪ್ರೆಸ್ ಬಸ್ ಮಗುಚಿ ಬಿದ್ದಿದ್ದು, 20 ಮಂದಿ ಪ್ರಯಾಣಿಕರು ಗಾಯಗೊಂಡು ಉಡುಪಿ ಮತ್ತು‌ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸ್ಥಳಕ್ಕೆ ಉಡುಪಿ ಸಂಚಾರಿ ಠಾಣಾ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಪೊಲೀಸರು ಹೊರ ತೆಗೆಗಿದ್ದಾರೆ.

ಇನ್ನು ಘಟನೆಯಿಂದಾಗಿ ಸ್ಥಳದಲ್ಲಿ ಸಂಚಾರಿ ದಟ್ಟಣೆ ಉಂಟಾಗಿದ್ದು, ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ.

Comments are closed.