ಕರಾವಳಿ

ಮಂಗಳೂರಿನಲ್ಲಿ ರೌಡಿ ಶೀಟರ್ ರಾಹುಲ್ ಬರ್ಬರ ಕೊಲೆ

Pinterest LinkedIn Tumblr

ಮಂಗಳೂರು: ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಕೆರೆಯಲ್ಲಿ ಯುವಕನೊಬ್ಬನನ್ನು ತಂಡವೊಂದು ಕೊಲೆಗೈದ ಘಟನೆ ಗುರುವಾರ ನಡೆದಿದೆ.

ಕೊಲೆಯಾದ ಯುವಕನನ್ನು ರೌಡಿಶೀಟರ್ ರಾಹುಲ್‌ (26) ಎಂದು ಗುರುತಿಸಲಾಗಿದೆ.

ಎಮ್ಮೆಕೆರೆ ಬಳಿ ಕೋಳಿ ಅಂಕ ನಡೆಯುತ್ತಿದ್ದು ಅದನ್ನು ವೀಕ್ಷಿಸಲು ಆಗಮಿಸಿದ್ದ ರಾಹುಲ್‌ ನನ್ನು ನಾಲ್ವರು ದುಷ್ಕರ್ಮಿಗಳ ತಂಡ ಅಟ್ಟಿಸಿಕೊಂಡು ಬಂದು ಮೈದಾನದ ಬಳಿ ಬರ್ಬರವಾಗಿ ಕಡಿದು ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿದೆ.

ಕೊಲೆಯಾದ ರಾಹುಲ್‌ ಹೊಯ್ಗೆಬಜಾರ್‌ ನಿವಾಸಿಯಾಗಿದ್ದು ಪಾಂಡೇಶ್ವರ ಠಾಣೆಯಲ್ಲಿ ರೌಡಿಶೀಟರ್‌ ಆಗಿ ಗುರುತಿಸಿಕೊಂಡಿದ್ದ. ಹಳೆ ದ್ವೇಷದ ಹಿನ್ನಲೆಯಲ್ಲಿ ಕೊಲೆ ಮಾಡಿರುಬಹುದು ಎಂದು ಶಂಕಿಸಲಾಗಿದೆ.

ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

 

Comments are closed.