ಕರ್ನಾಟಕ

ಭಾಷೆಯ ವಿಚಾರದಲ್ಲಿ ಸುದೀಪ್ ಮಾತನಾಡಿದ್ದು ಸರಿ: ಸಿಎಂ ಬಸವರಾಜ ಬೊಮ್ಮಾಯಿ

Pinterest LinkedIn Tumblr

ಹುಬ್ಬಳ್ಳಿ: ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಹೇಳಿರುವುದು ಸರಿಯಿದೆ. ರಾಜ್ಯಗಳು ಭಾಷಾವಾರು ಪ್ರಾಂತ್ಯಗಳು ಆದ ಮೇಲೆ ಆಯಾ ರಾಜ್ಯಗಳಲ್ಲಿರುವ ಸ್ಥಳೀಯ ಮಾತೃ ಭಾಷೆಯೇ ಸಾರ್ವಭೌಮವಾಗುತ್ತದೆ. ಅದನ್ನೇ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಅವರು ಹೇಳಿರುವ ವಿಚಾರ ಸರಿಯಿದೆ. ಇದನ್ನು ಎಲ್ಲರೂ ಮನಗಂಡು ಗೌರವ ಕೊಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ಕಮ್ಯುನಲ್ ರಿಲೀಜಿಯಸ್ (ಕೋಮು ಸೌಹಾರ್ದತೆ) ಅವರವರ ಮನಸ್ಸಿನಲ್ಲಿದೆ, ಭಾರತ ದೇಶದಂತಹ ಎಲ್ಲ ವರ್ಗದ, ಎಲ್ಲ ಧರ್ಮದ ಜನರನ್ನು ಒಗ್ಗೂಡಿಸಿ ಬಾಳ್ವೆ ನಡೆಸುವ ದೇಶವಿದ್ದರೆ ಅದು ಭಾರತ ಮಾತ್ರ. ಬೇರೆ ಕಡೆ ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯಾಗಿರುವುದು ನೋಡಿದ್ದೇವೆ. ನಮ್ಮ ದೇಶದಲ್ಲಿ ಶಾಂತಿ, ಸುವ್ಯವಸ್ಥೆ, ಸೌಹಾರ್ದತೆಯನ್ನು ನಡೆಸಿಕೊಂಡು ಹೋದರೆ ಸಾಕು, ಇಲ್ಲಿ ಒಬ್ಬರಿಗೊಬ್ಬರು ಸಲಹೆ ನೀಡಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತೆಲಂಗಾಣ ಮುಖ್ಯಮಂತ್ರಿ ಕೆ ಸಿ ಆರ್ ಚಂದ್ರಶೇಖರ್ ಅವರಿಗೆ ತಿರುಗೇಟು ಕೊಟ್ಟರು.

Comments are closed.