ಕರಾವಳಿ

ಗದ್ದಲ ಗೊಂದಲದಲ್ಲಿ ಕುಂದಾಪುರ ಪುರಸಭೆ ಸಾಮಾನ್ಯ ಸಭೆ; ಆಡಳಿತ ಪಕ್ಷ ಬಿಜೆಪಿ, ಪ್ರತಿ ಪಕ್ಷ‌ದ ನಡುವೆ ಎಲ್ಲಾ ವಿಚಾರಕ್ಕೂ ಕಿರಿಕ್..!

Pinterest LinkedIn Tumblr

ಕುಂದಾಪುರ: ನಾಮನಿರ್ದೇಶಿತ ಸದಸ್ಯರು ಮಾತನಾಡುವುದಕ್ಕೆ ನೀವ್ಯಾರು ಎಂಬ ಏಕವಚನ ಪ್ರಯೋಗ ಖಂಡಿಸಿ ನಾಮನಿರ್ದೇಶಿತ ಸದಸ್ಯರಿಂದ‌ ಕೆಲ‌ಕಾಲ ನಿಂತು ಪ್ರತಿಭಟನೆ, ಪುರಸಭೆಯಲ್ಲಿ ಟೆಂಡರ್ ಕರೆಯದೆ 50 ಲಕ್ಷ ವೆಚ್ಚದ ಕಾಮಗಾರಿ ನಡೆದಿದೆಯೆಂಬ ಪತ್ರಿಕಾ ಹೇಳಿಕೆಗೆ ಸ್ಪಷ್ಟನೆ.. ಸ್ಥಾಯಿ ಸಮಿತಿ ಆಯ್ಕೆ ಸಹಿತ ಎಲ್ಲವೂ ಗದ್ದಲ…ಗೊಂದಲ..!

ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಪುರಸಭೆ ಸಾಮಾನ್ಯ ಸಭೆ ಬಹುತೇಕ ಗದ್ದಲಕ್ಕೆ ಸಾಕ್ಷಿಯಾಗಿತ್ತು.

ಪುರಸಭೆಯ ಪ್ರತಿ ಪಕ್ಷದ ಸದಸ್ಯೆ ದೇವಕಿ ಪಿ.ಸಣ್ಣಯ್ಯ, ಸ್ಥಾಯಿ ಸಮಿತಿ ಆಯ್ಕೆ ಟೆಂಡರ್ ಕರೆಯದೆ ನಡೆಸಿದ ಕಾಮಗಾರಿ ಬಗ್ಗೆ ಡಿಸಿಗೆ ದೂರು ನೀಡಿದ್ದು, ನಗರಾಭಿವೃದ್ಧಿ ಕೋಶದ ಪಿಡಿ ತನಿಖೆ ಮಾಡಿ ನೀಡಿದ ವರದಿ ಪ್ರತಿಗೆ ಒತ್ತಾಯಿಸಿದ್ದು, ಆಡಳಿತ ವಿರೋಧ‌ ಪಕ್ಷದ ಸದಸ್ಯರ ನಡುವೆ ಗಲಾಟೆಗೆ ಕಾರಣವಾಯಿತು.

ಸ್ಥಾಯಿ ಸಮಿತಿ ಆಯ್ಕೆ ಹಿನ್ನೆಲೆಯಲ್ಲಿ ಸಣ್ಣಪುಟ್ಟ ದೋಷಗಳಿದ್ದು, ಸರಿಪಡಿಸಿಕೊಂಡು ಹೋಗುವ ನಿರ್ಣಯ ಕೂಡಾ ಆಗಿದ್ದು, ಅದನ್ನು ದೊಡ್ಡ ಸಂಗತಿ ಮಾಡದೆ ಪುರಸಭೆ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಸಹಕಾರ ನೀಡುವಂತೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಮನವಿ ಮಾಡಿದರೂ ಸದಸ್ಯರ ಗಲಾಟೆ ಅಂದಾಜು ಒಂದೂವರೆ ಗಂಟೆ ಕಾಲ ಶಾಂತವಾಗಿರಲಿಲ್ಲ. ಪ್ರತಿ ಪಕ್ಷದ ಮುಖಂಡ ಚಂದ್ರಶೇಖರ್ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ನಮ್ಮ ವಿರೋಧವಿಲ್ಲ. ಸಮಿತಿ ನೇಮಕ ಪ್ರಕ್ರಿಯೆಗೆ ವಿರೋದ ವ್ಯಕ್ತ ಪಡಿಸಲಾಗಿದೆ ಎಂದರು.

ನಂತರ ಸಭೆ ಮುಂದುವರಿದರೂ ನಾಮನಿರ್ದೇಶಕ ಸದಸ್ಯರಿಗೆ ದೇವಕಿ ಸಣ್ಣಯ್ಯ ಏಕವಚನದಲ್ಲಿ ಮಾತನಾಡಿದ್ದು ಅಲ್ಲದೆ, ಸಭೆಯಲ್ಲಿ ಚರ್ಚಿಸಲಿಕ್ಕೆ ನೀವ್ಯಾರ ಎಂದು ಕೇಳಿದ್ದಾರೆ.

ವಿಧಾನಪರಿಷತ್ ಚುನಾವಣೆಗೆ ಮತ ಹಾಕಲು ಹಕ್ಕಿರುವ ನಮಗೆ ಸಭೆಯಲ್ಲಿ ನಮಗೆ ಚರ್ಚಿಸಲು ಅವಕಾಶ ಇದೆಯಾ ಇಲ್ಲವಾ? ನಾವು ಸುಮ್ಮನೆ ಚಾ ಕುಡಿಯುವುದಕ್ಕೆ ಬರಬೇಕು. ನಮ್ಮನ್ನು ಏಕವಚನದಲ್ಲಿ ಸಂಬೋಧನೆ ಮಾಡಿದ್ದು ಹಿಂದಕ್ಕೆ ಪಡೆದು ಕ್ಷಮೆ ಕೇಳಬೇಕು. ತನಕ ಸಭೆಯಲ್ಲಿ ನಿಂತು ಪ್ರತಿಭಟನೆ ಮಾಡುತ್ತೇವೆ ಎಂದು ನಾಮನಿರ್ದೇಶಿತ ಸದಸ್ಯರಾದ ಪುಷ್ಪಾ ಶೇಟ್, ದಿವಾಕರ ಕೊಡ್ಗಿ, ನಾಗರಾಜ ಕಾಂಚನ್, ಪ್ರಕಾಶ್ ಖಾರ್ವಿ, ರತ್ನಾಕರ ಶೇರಿಗಾರ್ ನಿಂತು ಪ್ರತಿಭಟನೆ‌ ಮಾಡಿದ್ದು ನಂತರ ನಾಮನಿರ್ದೇಶಕ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಸಣ್ಣಪುಟ್ಟ ಲೋಪದೇಷಗಳ ಸರಿಪಡಿಸಿಕೊಂಡು ಪುರಸಭೆ ಅಭಿವೃದ್ಧಿಗೆ ಒತ್ತುಕೊಡೋಣ. ಎಲ್ಲರೂ ಸಹಕಾರಿ ನೀಡಿದರೆ ಮಾತ್ರ ಕೆಲಸ ಮಾಡಲು ಸಾಧ್ಯ ಎಂದು ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಹಾಗೂ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿಯವರ ಮನವಿಯಂತೆ ಮತ್ತೆ ಸಭೆ ಮುಂದುವರಿಯಿತು.

ಪುರಸಭಾ ವ್ಯಾಪ್ತಿಯಲ್ಲಿ ಸಿಮೆಂಟ್ ಸ್ಲಾಬ್ ಅಳವಡಿಕೆಯಲ್ಲಿ 50 ಲಕ್ಷ ರೂ ಕಾಮಗಾರಿ ಟೆಂಡರ್ ಕರೆಯದೇ ನೀಡಲಾಗಿದೆ ಎಂಬ ವಿರೋಧ ಪಕ್ಷದ ಸದಸ್ಯೆ ದೇವಕಿ ಸಣ್ಣಯ್ಯ ಅವರ ಪತ್ರಿಕಾ ಹೇಳಿಕೆ ಮತ್ತೊಮ್ಮೆ ಗಲಾಟೆಗೆ ವೇದಿಕೆ ಆಗಿದ್ದು, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ದೇವಾಡಿಗ ವೇದಿಕೆಯಿಂದ ಇಳಿದು ಈ ಹೇಳಿಕೆ ಬಗ್ಗೆ ಖಂಡಿಸಿದರು.

ಒಟ್ಟಾರೆ ಬುಧವಾರ ನಡೆದ ಕುಂದಾಪುರ ಪುರಸಭೆ ಸಾಮಾನ್ಯ ಸಭೆ ಪುರಸಭೆ ವ್ಯಾಪ್ತಿಯ ಅಭಿವೃದ್ಧಿ‌ ಕುರಿತ ಚರ್ಚೆಗಿಂತ ಗಲಾಟೆಯಲ್ಲಿ 2-3 ಗಂಟೆಗಳ ಕಾಲ ವ್ಯರ್ಥವಾಯಿತು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ದೇವಾಡಿಗ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

Comments are closed.