ಕರ್ನಾಟಕ

ಬೆಂಗಳೂರಿನಲ್ಲಿ ಪಶ್ಚಿಮ ಬಂಗಾಳದ ಯುವತಿ ಮೇಲೆ ಗ್ಯಾಂಗ್ ರೇಪ್; ದೆಹಲಿ ಮೂಲದ ನಾಲ್ವರು ಈಜುಪಟುಗಳ ಸೆರೆ..!

Pinterest LinkedIn Tumblr

ಬೆಂಗಳೂರು: ಪಶ್ಚಿಮ ಬಂಗಾಳದ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಸಂಜಯನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ದೆಹಲಿ‌ಮೂಲದ ರಜತ್, ಶಿವ್ ರಾಣಾ, ದೇವ್ ಸರೋಯಿ, ಯೋಗೇಶ್ ಕುಮಾರ್ ಬಂಧಿತ ಆರೋಪಿಗಳು.

(ಸಾಂದರ್ಭಿಕ ಚಿತ್ರ)

ಮಾರ್ಚ್ 24ರಂದು ಪಶ್ಚಿಮ ಬಂಗಾಳದ ಯುವತಿಯನ್ನು ರೆಸ್ಟೋರೆಂಟ್ಗೆ ಕರೆದೊಯ್ದಿದ್ದ ರಜತ್, ನಂತರ ತಡರಾತ್ರಿ ಆದ ಕಾರಣ ಸಂಜಯನಗರ ಠಾಣಾ ವ್ಯಾಪ್ತಿಯ ರೂಮಿಗೆ ಕರೆದುಕೊಂಡು ಹೋಗಿದ್ದ. ರೂಮ್ ನಲ್ಲಿ ಬೆದರಿಸಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಯುವತಿ ಬೆಂಗಳೂರಿನಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಯುವತಿ ನೀಡಿದ ದೂರಿನ ಹಿನ್ನೆಲೆ ಎಫ್ಐಆರ್ ದಾಖಲಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ರಾಷ್ಟ್ರಮಟ್ಟದ ಈಜುಪಟುಗಳಾಗಿದ್ದು ತರಬೇತಿಗಾಗಿ ಬೆಂಗಳೂರಿನಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.

Comments are closed.