ಕರಾವಳಿ

ಕೆರಾಡಿಯಲ್ಲಿ ಬಾವಿಗೆ ಬಿದ್ದ ಹೆಣ್ಣು ಚಿರತೆ ರಕ್ಷಿಸಿದ ಕುಂದಾಪುರ ಅರಣ್ಯ ಇಲಾಖೆಯವರು..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕುಂದಾಪುರ ವಲಯ ಅರಣ್ಯ ವ್ಯಾಪ್ತಿಗೊಳಪಡುವ ಕೆರಾಡಿ ಎಂಬಲ್ಲಿ ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಲಾಗಿದೆ.

ಕೆರಾಡಿಯ ಸುಕುಮಾರ ಶೆಟ್ಟಿ ಎನ್ನುವರ ಮನೆಯ ಆವರಣವಿಲ್ಲದ ಬಾವಿಗೆ ಚಿರತೆ ಬಿದ್ದಿರುವುದನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ತಕ್ಷಣವೇ ಸ್ಥಳಕ್ಕೆ ತೆರಳಿದ ಅವರು ಬಾವಿಗೆ ಹಗ್ಗ ಕಟ್ಟಿದ ಬೋನು ಬಿಟ್ಟು ಚಿರತೆ ಪ್ರವೇಶಿಸುವಂತೆ ಮಾಡಿ ನಾಜೂಕಾಗಿ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.

ಮೂರೂವರೆ ವರ್ಷ ಪ್ರಾಯದ ಹೆಣ್ಣು ಚಿರತೆ ಇದಾಗಿದ್ದು ಆಹಾರವರಸಿ ಬಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಉದಯ್, ಸುನೀಲ್, ಶರತ್, ದಿಲೀಪ್, ಅರಣ್ಯ ರಕ್ಷಕರಾದ ಬಸವರಾಜ್, ಹರಿಪ್ರಸಾದ್, ರಾಘವೇಂದ್ರ, ವಿಜಯ್, ರಂಜಿತ್, ಅಶೋಕ್, ಗ್ರಾಮ ಅರಣ್ಯ ಸಮಿತಿಯವರು ಹಾಗೂ ಸ್ಥಳೀಯರು ಇಲಾಖೆಯೊಂದಿಗೆ ಚಿರತೆ ರಕ್ಷಣೆ ಕಾರ್ಯಾಚರಣೆಗೆ ಸಹಕರಿಸಿದ್ದರು.

Comments are closed.