ಮಂಗಳೂರು: ಅಪಘಾತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಟ್ರಾಫಿಕ್ ಠಾಣೆಯ ಎಎಸೈ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಕೂಳೂರು ನಿವಾಸಿ ಸದಾಶಿವ (58) ಮೃತ ದುರ್ದೈವಿ.

ಮಾರ್ಚ್ 14 ರಂದು ಸದಾಶಿವ ಅವರು ಕರ್ತವ್ಯದಲ್ಲಿದ್ದಾಗ, ಕರ್ನಾಟಕ ಏಜೆನ್ಸಿಯ ಬಳಿ ಕುಂಟಿಂಕನ್ ಫ್ಲೈಓವರ್ ನಂತರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರ್ಚ್ 17 ರಂದು ತಡರಾತ್ರಿ ಸದಾಶಿವ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದರು.
ಸದಾಶಿವ ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಮಂಗಳೂರು ನಗರ ಕಮಿಷನರ್ ಶಶಿಕುಮಾರ್ ಸದಾಶಿವ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.
Comments are closed.