ಕರಾವಳಿ

ಹೈಕೋರ್ಟ್ ನಲ್ಲಿ ಹಿಜಾಬ್ ವಿವಾದ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ವಿವಿದೆಡೆ ಭುಗಿಲೆದ್ದಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್ ನಲ್ಲಿ ಬುಧವಾರ ವಿಚಾರಣೆ ನಡೆಸಿದ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾಯಿಸಿ ಆದೇಶ ನೀಡಿದ್ದಾರೆ.

ಮಧ್ಯಂತರ ಆದೇಶವನ್ನು ವಿಭಾಗೀಯ ಪೀಠವೇ ನೀಡಲಿ , ಹಿಜಾಬ್ ವಿವಾದ ವಿಸ್ತ್ರತ ಪೀಠಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ. ವಿಸ್ಕ್ರತ ಪೀಠ ರಚನೆನ್ನು ನ್ಯಾಯಮೂರ್ತಿಯೇ ನಿರ್ಧರಿಸಲಿ ಎಂದು ಹೇಳಿ ಸಂಪೂರ್ಣ ಕಡತವನ್ನು ಮುಖ್ಯ ನ್ಯಾಯಮೂರ್ತಿಗೆ ಹಸ್ತಾಂತರಿಸಿ ದಾಖಲೆಗಳನ್ನು ಸಲ್ಲಿಸುವಂತೆ ರಿಜಿಸ್ಟ್ರಾರ್ ಗೆ ಸೂಚನೆ ನೀಡಿದೆ.

ಇದು ತುರ್ತಾಗಿ ಬಗೆ ಹರಿಸಬೇಕಾದ ಪ್ರಕರಣ. ಪ್ರಕರಣದಲ್ಲಿ ಅನೇಕ ಮುಖ್ಯ ಪ್ರಶ್ನೆಗಳು ಮೂಡಿದ್ದು, ಮಧ್ಯಂತರ ಆದೇಶವನ್ನೂ ನ್ಯಾಯಮೂರ್ತಿಗಳೇ ನೀಡಲಿ ಎಂದು ಏಕ ಸದಸ್ಯ ಪೀಠ ಹೇಳಿದೆ.

 

 

Comments are closed.