ಕರಾವಳಿ

3.48 ಕೋಟಿ ಮೌಲ್ಯದ 3 ಕೆಜಿ 480 ಗ್ರಾಂ ತೂಕದ ಅಂಬರ್ ಗ್ರೀಸ್ ಮಾರಾಟ ಯತ್ನ; 6 ಮಂದಿ ಬಂಧನ

Pinterest LinkedIn Tumblr

ಮಂಗಳೂರು: ಅಕ್ರಮವಾಗಿ ನಿಷೇಧಿತ ಅಂಬರ್ ಗ್ರೀಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ 6 ಜನರನ್ನು ಬಂಧಿಸಿ, ಅಪಾರ ಮೌಲ್ಯದ ಅಂಬರ್ ಗ್ರೀಸ್ ನ್ನು ವಶಪಡಿಸಿಕೊಂಡ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ನವೋದಯ ಶಾಲೆಯ ಬಳಿ ನಿಷೇಧಿತ ಅಕ್ರಮ ಅಂಬರ್ ಗ್ರೀಸ್ ಮಾರಾಟ ಮಾಡಲು ಬಂದಿದ್ದ ಬೆಂಗಳೂರು ಮತ್ತು ಉಡುಪಿ ಮೂಲದ 6 ಮಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಂಧಿತರನ್ನು ಪ್ರಶಾಂತ್ (24), ಸತ್ಯರಾಜ್ (32), ರೋಹಿತ್ (27), ರಾಜೇಶ್ (37), ವಿರುಪಾಕ್ಷಾ, (37), ನಾಗಾರಾಜ್ (31 ) ಎಂದು ಗುರುತಿಸಲಾಗಿದ್ದು, ಬಂಧಿತರಿಂದ, 3.48 ಕೋಟಿ ಮೌಲ್ಯದ 3 ಕೆಜಿ 480 ಗ್ರಾಂ ತೂಕದ ಅಂಬರ್ ಗ್ರೀಸ್ ನ್ನು ವಶಕ್ಕೆ ಪಡೆಯಲಾಗಿದೆ.

ನಿಷೇಧಿತ ಅಂಬರ್ ಗ್ರೀಸ್ ನ್ನು ತಮಿಳುನಾಡು ಮೂಲದ ಮೀನುಗಾರ ಸೇದು ಮಾಣಿಕ್ಯ ಎಂಬುವರು ನೀಡಿದ್ದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಕಾರ್ಯಚರಣೆಯಲ್ಲಿ ಸಹಾಯಕ ಪೊಲೀಸ್‌ ಆಯುಕ್ತರಾದ ದಿನಕರ ಶೆಟ್ಟಿ ಮಾಗದರ್ಶದಲ್ಲಿ, ಕೊಣಾಜೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್‌ ದೇವಾಡಿಗ ನೇತೃತ್ವದಲ್ಲಿ, ಉಪ ನಿರೀಕ್ಷಕರಾದ ಶರಣಪ್ಪ ಭಂಡಾರಿ ಮತ್ತು ಮಲ್ಲಕಾರ್ಜುನ್‌ ಬಿರಾದಾರ್‌, ಎ.ಎಸ್‌. ಐರವರಾದ ಮೋಹನ್‌ ದೇರಳಕಟ್ಟೆ, ಸಂಜೀವ ಹಾಗೂ ಸಿಬ್ಬಂದಿಗಾಳಾದ ಆಶೋಕ್‌, ಶಿವಕುಮಾರ್‌, ಪುರುಷೋತ್ತಮ, ದೀಪಕ್‌, ಅಂಬರೀಶ್‌ ಘಂಟಿ ಭರಮಾ ಬಡಿಗೇರ್‌ ಇದ್ದರು.

Comments are closed.