ಕರಾವಳಿ

ಹಿಜಾಬ್’ಗೆ ನೀಲಿ ಶಾಲು ಧರಿಸಿ ಬೆಂಬಲಿಸಿದ ವಿದ್ಯಾರ್ಥಿಗಳು; ಚಿಕ್ಕಮಗಳೂರಿನಲ್ಲಿ ‘ಜೈ ಭೀಮ್’ ಘೋಷಣೆ..!

Pinterest LinkedIn Tumblr

ಚಿಕ್ಕಮಗಳೂರು: ಹಿಜಾಬ್ ಹಾಗೂ ಕೇಸರಿ ಶಾಲು ಬಳಿಕ ಇದೀಗ ನೀಲಿ ಶಾಲಿನ ಸರದಿ ಆರಂಭವಾಗಿದೆ. ಚಿಕ್ಕಮಗಳೂರು ಐ.ಡಿ.ಎಸ್.ಜಿ ಕಾಲೇಜಿನಲ್ಲಿ ನೀಲಿ ಶಾಲು ಧರಸಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ.

ಹಿಜಾಬ್ ಮುಂದುವರಿಸಬೇಕು ಎಂದು ಆಗ್ರಹಿಸಿ ನೀಲಿ ಶಾಲು ಧರಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ‘ಜೈ ಭೀಮ್‘ ಘೋಷಣೆ ಕೂಗಿದರು. ಪ್ರತಿಯಾಗಿ ಕೇಸರಿ ಶಾಲು ಧರಿಸಿರುವ ವಿದ್ಯಾರ್ಥಿಗಳು ‘ಜೈ ಶ್ರೀರಾಮ್’ ಘೋಷಣೆ ಕೂಗಿದರು.

ಸರ್ಕಾರದ ಆದೇಶವನ್ನು ನಮ್ಮ ಕಾಲೇಜಿನಲ್ಲಿ ಪಾಲಿಸುತ್ತಿಲ್ಲ. ಸಮವಸ್ತ್ರ ಹಾಕದೆ ಬಂದರೆ ವಾಪಸ್ ಕಳಿಸುತ್ತಿದ್ದಾರೆ. ಇಷ್ಟು ದಿನ ಇಲ್ಲದ ಕಾನೂನು ಈಗ ನಮಗೆ ಹೇಳುತ್ತಿದ್ದಾರೆ. ಹಿಜಾಬ್ ತೆಗೆಯುವವರೆಗೂ ನಾವು ಕೇಸರಿ ಶಾಲು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Comments are closed.