ಪ್ರಮುಖ ವರದಿಗಳು

ಪಂಚಭೂತಗಳಲ್ಲಿ ಲೀನರಾದ ಲತಾ ಮಂಗೇಶ್ಕರ್; ಸಕಲ ಸರಕಾರಿ ಗೌರವದೊಂದಿಗೆ ಗಾನಕೋಗಿಲೆ ಅಂತ್ಯಕ್ರಿಯೆ

Pinterest LinkedIn Tumblr

ಮುಂಬಯಿ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ ಅವರ ಅಂತ್ಯಕ್ರಿಯೆ ನೆರವೇರಿದೆ. ಪಂಚಭೂತಗಳಲ್ಲಿ ಲತಾ ಮಂಗೇಶ್ಕರ್​ ಲೀನರಾಗಿದ್ದಾರೆ.

ಸಾವಿರಾರು ಮಂದಿ ಲತಾ ಮಂಗೇಶ್ಕರ್​ ಅವರ ದರ್ಶನ ಪಡೆದಿದ್ದಾರೆ. ಲತಾ ಮಂಗೇಶ್ಕರ್​ ನಿಧನಕ್ಕೆ ಇಡೀ ಭಾರತವೇ ಕಂಬನಿ ಮಿಡಿದಿದೆ. ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ಲತಾ ಮಂಗೇಶ್ಕರ್​​ ಅವರ ಅಂತ್ಯಕ್ರಿಯೆ ನೆರವೇರಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಲತಾ ಮಂಗೇಶ್ಕರ್​ ಭಾನುವಾರ ಬೆಳಗ್ಗೆ 8.12ಕ್ಕೆ ಇಹಲೋಕ ತ್ಯಜಿಸಿದ್ದರು. ಸಂಜೆವರೆಗೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಮಿತಾಭ್​ ಬಚ್ಚನ್​ ಸೇರಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.

ಭಾರತ ರತ್ನ ಲತಾ ಮಂಗೇಶ್ಕರ್ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಸಂಗೀತ ಮೇಲೆ ಇವರಿಗಿದ್ದ ಪ್ರೀತಿ, ಶ್ರದ್ಧೆ ಮಾತ್ರ ಅಪಾರ. ಲತಾ ಮಂಗೇಶ್ಕರ್​ ಅವರ ಪಾರ್ಥೀವ ಶರೀರವನ್ನು ಸಂಜೆ 4 ಗಂಟೆಗೆ ಅವರ ನಿವಾಸದಿಂದ ಶಿವಾಜಿ ಪಾರ್ಕ್​ಗೆ ರವಾನೆ ಮಾಡಲಾಯ್ತು. ಸಕಲ ಸರ್ಕಾರಿ ಗೌರವಗಳೊಂದಿಗೆ ಮೆರವಣಿಗೆ ಮಾಡಿ ಶಿವಾಜಿ ಪಾರ್ಕ್​ ತಲುಪಿತು. ಶಿವಾಜಿ ಪಾರ್ಕ್​ನಲ್ಲೂ ಅಂತಿಮದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಪ್ರಧಾನಿ ಮೋದಿ ಕೂಡ ಇಲ್ಲಿಗೆ ಆಗಮಿಸಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.

 

Comments are closed.