ಕುಂದಾಪುರ: ಕುಂದಾಪುರದಲ್ಲಿ ಬುಧವಾರ ಆರಂಭಗೊಂಡ ಹಿಜಾಬ್ ವಿವಾದ ಮತ್ತೆ ಇಂದೂ ಕೂಡಾ ಮುಂದುವರಿದಿದೆ. ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿಗೆ (ಜ್ಯೂನಿಯರ್ ಕಾಲೇಜು) ಇಂದೂ ಕೂಡಾ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು, ಕಾಲೇಜು ಆವರಣದೊಳಗೆ ಪ್ರವೇಶ ನಿರಾಕರಣೆ ಮಾಡಿದ ಘಟನೆ ನಡೆದಿದೆ.

ಕಾಲೇಜು ಮುಖ್ಯಸ್ಥರು ಸರ್ಕಾರದ ಆದೇಶದಂತೆ ಕಾಲೇಜು ವಸ್ತ್ರಸಂಹೀತೆಯನ್ನು ಎಲ್ಲಾ ವಿದ್ಯಾರ್ಥಿಗಳು ಪಾಲಿಸಬೇಕು ಎಂದು ನಿನ್ನೆಯೇ ಸ್ಪಷ್ಟವಾಗಿ ಸೂಚನೆ ನೀಡಿದ್ದರಿಂದ ಇವತ್ತು ಕಾಲೇಜು ಆವರಣ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರು ಮತ್ತು ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರ ನಡುವೆ ಮಾತಿನ ಚಕಮಕಿ ನಡೆಯಿತು.
ನಾವು ಭಯೋತ್ಪಾಧಕರಲ್ಲ…!
ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳನ್ನು ಗೇಟಿನಲ್ಲಿ ತಡೆಯಲಾಯಿತು. ಕಾಲೇಜಿನ ಆವರಣದ ಹೊರಗೆ ನಿಂತು ನಾವು ಭಾರತದ ಪ್ರಜೆಗಳು, ಭಯೋತ್ಪಾಕರಲ್ಲ, ನಮಗೂ ಕಲಿಕೆಗೆ ಅವಕಾಶ ಕೊಡಿ ಎಂದು ಮನವಿ ಮಾಡುತ್ತಾ ಕಣ್ಣೀರು ಹಾಕಿದರು. ಮಧ್ಯಾಹ್ನದವರೆಗೆ ಕೂಡ ವಿದ್ಯಾರ್ಥಿಗಳು ಗೇಟ್ ಬಳಿ ನಿಂತ ದೃಶ್ಯ ಕಂಡುಬಂತು.
Comments are closed.