ಕರಾವಳಿ

ಕೈಕಾಲಿಗೆ ಕೋಳ ಹಾಕಿಕೊಂಡು ಸಮುದ್ರದಲ್ಲಿ ಮೂರುವರೆ ಕಿ.ಮೀ ಈಜಿ ದಾಖಲೆ ನಿರ್ಮಿಸಿದ ಗಂಗಾಧರ್‌ ಜಿ ಕಡೇಕಾರ್

Pinterest LinkedIn Tumblr

ಉಡುಪಿ: ಕೈ ಹಾಗೂ ಕಾಲಿಗೆ ಕೋಳ ಹಾಕಿಕೊಂಡು ಸಮುದ್ರದಲ್ಲಿ ಮೂರೂವರೆ ಕಿ.ಮೀ. ಈಜುವ ಮೂಲಕ 66 ವರ್ಷ ಪ್ರಾಯದ ಗಂಗಾಧರ್ ಜಿ.ಕಡೇಕಾರ್ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ನಲ್ಲಿ ದಾಖಲೆ ಮಾಡಿದ್ದಾರೆ.

ಕಿದಿಯೂರು ಪಡುಕರೆ ಬಳಿಯ ಶ್ರೀದೇವಿ ಭಜನಾ ಮಂದಿರದ ಬಳಿಯ ಕಡಲಿನಲ್ಲಿ ಸೋಮವಾರ ಬೆಳಿಗ್ಗೆ 7.50ಕ್ಕೆ ಕೈಗೆ ಕೋಳ ಹಾಗೂ ಕಾಲಿಗೆ ಸರಪಳಿ ಬಿಗಿದುಕೊಂಡು ಸಮುದ್ರಕ್ಕೆ ಹಾರಿದ ಗಂಗಾಧರ್, ನಿರಂತರವಾಗಿ 5 ಗಂಟೆ 35 ನಿಮಿಷಗಳ ಕಾಲ ಈಜಿ ದಾಖಲೆ ನಿರ್ಮಾಣ ಮಾಡಿದರು.

ಸಮುದ್ರದಲ್ಲಿ ಅಲೆಗಳ ಉಬ್ಬರ ಹೆಚ್ಚಾಗಿದ್ದರೂ ದೃತಿಗೆಢದ ಗಂಗಾಧರ್‌ ಅಲೆಗಳಿಗೆ ಎದುರಾಗಿ ಡಾಲ್ಫಿನ್ ಮಾದರಿಯಲ್ಲಿ ಈಜುತ್ತ ಗುರಿ ಮುಟ್ಟಿದರು.

ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆಯ ಮನೀಷ್‌ ವೈಷ್ಣಯ್‌ ಸ್ಥಳದಲ್ಲೇ ತಾತ್ಕಾಲಿಕ ವಿಶ್ವದಾಖಲೆ ಪ್ರಮಾಣಪತ್ರವನ್ನು ಹಸ್ತಾಂತರಿಸಿ, ದಾಖಲೆಗಳನ್ನು ಪರಿಶೀಲಿಸಿ ಶೀಘ್ರ ಅಧಿಕೃತ ಪ್ರಮಾಣಪತ್ರವನ್ನು ನೀಡುವುದಾಗಿ ಘೋಷಿಸಿದರು.

ಗಂಗಾಧರ ಜಿ.ಕಡೆಕಾರು ಕಳೆದ ವರ್ಷ ಕಿದಿಯೂರು ಪಡೆಕೆರೆಯ ಸಮುದ್ರದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು, ಬೀಗ ಹಾಕಿ 1.4.ಕಿ.ಮೀಟರ್ ದೂರ ಬ್ರೆಸ್ಟ್ ಸ್ಟೋಕ್ ಶೈಲಿ ಯಲ್ಲಿ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ರಾಷ್ಟ್ರೀಯ ದಾಖಲೆ ಯನ್ನು ನಿರ್ಮಿಸಿದ್ದರು.

 

Comments are closed.