ಕರಾವಳಿ

ವಂಡ್ಸೆ ಗ್ರಾ.ಪಂ ಉಪಾಧ್ಯಕ್ಷೆ ಸಹಿತ ಹಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

Pinterest LinkedIn Tumblr

ಉಡುಪಿ: ಬಿಜೆಪಿ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ವಂಡ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗೀತಾ ಅವಿನಾಶ್ ಮತ್ತವರ ಬಳಗದವರು ನಮ್ಮ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡರು‌.

ಇದೇ ಸಂದರ್ಭ ವಂಡ್ಸೆ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಅವಿನಾಶ್ ಮೊಗವೀರ, ರಾಜೇಶ್ ಕಾಂಚನ್, ರಾಜೇಶ್ ಹಕ್ಲಮನೆ, ಶೈಲೇಶ್ ಪೂಜಾರಿ, ಕೃಷ್ಣ ಪೂಜಾರಿ, ಗೋವಿಂದ ಪೂಜಾರಿ ಏಳುಮುಡಿ ಮನೆ, ಹನೀಫ್ ಸಾಹೇಬ್ ವಂಡ್ಸೆ, ಗಣೇಶ್ ಪೂಜಾರಿ ಏಳುಮುಡಿ ಮನೆ,‌ ಸುಧೀರ, ಕಿರಣ ಮುಂತಾದವರು ಬಿಜೆಪಿ ಸೇರ್ಪಡೆಗೊಂಡರು.

ಇವರೆಲ್ಲರ ಆಗಮನದಿಂದ ಅಭಿವೃದ್ಧಿಯನ್ನು ಜನ ಸಂತೋಷದಿಂದ ಸ್ವೀಕರಿಸುತ್ತಾರೆ ಎಂದು ಮನದಟ್ಟಾಯ್ತು ಮತ್ತು ವಂಡ್ಸೆ ಭಾಗದಲ್ಲಿ ಬಿಜೆಪಿ ಪಕ್ಷದ ಬಲ‌ಹೆಚ್ಚಿತು.‌ ವಂಡ್ಸೆ ಗ್ರಾಮ ಪಂಚಾಯತ್ ಅಲ್ಲಿ 7 ಸದಸ್ಯರ ಪೈಕಿ 4 ಸದಸ್ಯರು ಭಾರತೀಯ ಜನತಾ ಪಾರ್ಟಿ ಸದಸ್ಯರೆನ್ನುವುದು ಸಂತೋಷದ ವಿಷಯ ಎಂದು ಬೈಂದೂರು ಶಾಸಕ ಬಿ.ಎಮ್. ಸುಕುಮಾರ ಶೆಟ್ಟಿ ಹೇಳಿದ್ದಾರೆ.

Comments are closed.