ಉಡುಪಿ: ಉಡುಪಿ ಜಿಲ್ಲೆ ಉದ್ಯಾವರದ ಅಯ್ಯಪ್ಪ ಸ್ವಾಮಿ ಮಂದಿರದಿಂದ ಹೊರಟ ಅಯ್ಯಪ್ಪ ಮಾಲಾಧಾರಿ ಸುರೇಶ್ ಬಂಗೇರ ಅವರು ಶಬರಿಮಲೆ ಯಾತ್ರೆಯ ವೇಳೆ ಹೃದಯಾಘಾತದಿಂದ ಜ.16ರಂದು ಮೃತಪಟ್ಟ ಘಟನೆ ವರದಿಯಾಗಿದೆ.
ಜ.14ರಂದು ಉದ್ಯಾವರದಲ್ಲಿ ಪೂಜೆಯನ್ನು ಮುಗಿಸಿ ಸುಮಾರು 14 ಜನ ಅಯ್ಯಪ್ಪ ಮಾಲಾಧಾರಿಗಳ ತಂಡವು ಶಬರಿಮಲೆ ಯಾತ್ರೆಯನ್ನು ಕೈಗೊಂಡಿತ್ತು.
ಸುರೇಶ್ ಬಂಗೇರ ಅವರು ಸುಮಾರು 28 ಬಾರಿ ಶಬರಿಮಲೆ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ್ದರು. ಈ ಬಾರಿಯ ಯಾತ್ರೆಯ ವೇಳೆ ಶಬರಿಮಲೆಯ ಗಣೇಶ ಬೆಟ್ಟ ಹತ್ತುವ ವೇಳೆ ಹೃದಯಾಘಾತ ಕ್ಕೊಳಗಾಗಿದ್ದು, ಕೂಡಲೇ ಪಂಪೆಯ ಚಿಕಿತ್ಸಾ ಕೇಂದ್ರಕ್ಕೆ ಕೊಂಡೊಯ್ಯಲಾಗಿದ್ದು, ಬಳಿಕ ಅಲ್ಲಿಂದ ಪಲ್ಲತ್ತಿಟ್ಟು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿರುತ್ತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಉದ್ಯಾವರ ಸಂಪಿಗೆನಗರದ ನಿವಾಸಿಯಾಗಿರುವ ಅಯ್ಯಪ್ಪ ವೃತಧಾರಿ ಸುರೇಶ್ ಬಂಗೇರ ಅವರು ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದು ಎಂಬ ಮಾಹಿತಿಯಿದೆ.
Comments are closed.