ಕರಾವಳಿ

ಪರಾರಿಗೆ ಯತ್ನಿಸಿದ ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಮಂಗಳೂರು ಎಎಸ್ಐ

Pinterest LinkedIn Tumblr

ಮಂಗಳೂರು: ಯುವಕನೊಬ್ಬ ಮೊಬೈಲ್‌ ಹಾಗೂ ಪರ್ಸ್ ಕದ್ದು ಪರಾರಿಯಾಗಲು ಯತ್ನಿಸಿದಾತನನ್ನು ಹಿಡಿಯಲು ಪೊಲೀಸ್ ಕಮಿಷನರ್ ಸೂಚನೆಯಂತೆ ಪೊಲೀಸ್‌‌ ಸಹಾಯಕ ಉಪನಿರೀಕ್ಷಕರೊಬ್ಬರು (ಎಎಸ್ಐ) ಆತನನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನೆಹರೂ ಮೈದಾನದಲ್ಲಿ ಮಲಗಿದ್ದ ವ್ಯಕ್ತಿಯೋರ್ವನ ಮೊಬೈಲ್‌, ಪರ್ಸ್ ಕದ್ದು ಪರಾರಿಯಾಗುತ್ತಿದ್ದನ್ನು ಕಂಡ ಸ್ಥಳೀಯರು ಹಾಗೂ ಮೊಬೈಲ್‌‌‌‌ ಕಳೆದುಕೊಂಡ ವ್ಯಕ್ತಿ ಬೆನ್ನಟ್ಟಿದ್ದಾರೆ. ಮೊಬೈಲ್‌ ಕದ್ದು ಪರಾರಿಯಾಗಲು ಯತ್ನಿಸಿದ ಕಳ್ಳನನ್ನು ಪೊಲೀಸ್‌ ಸಿನಿಮೀಯ ಶೈಲಿಯಲ್ಲಿ ಅಂದಾಜು ಒಂದೂವರೆ ಕಿಲೋಮೀಟರ್ ಬೆನ್ನಟ್ಟಿ ಹಿಡಿದು, ಮತ್ತೋರ್ವನನ್ನು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆ ಬಗ್ಗೆ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಪ್ರಶಂಸಿಸಿದ್ದಾರೆ.

ಘಟನೆಯ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.