ಕರ್ನಾಟಕ

ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ; ಪಾದಯಾತ್ರೆಯ ಪೂಜೆ ವೇಳೆ ಜಾರಿದ ಡಿಕೆಶಿಗೆ ಬಿಜೆಪಿ ವ್ಯಂಗ್ಯ..!

Pinterest LinkedIn Tumblr

ಬೆಂಗಳೂರು: ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಕನಕಪುರದ ಸಂಗಮದಲ್ಲಿ ಭಾನುವಾರ ಬೆಳಗ್ಗೆ ಚಾಲನೆ ನೀಡಲಾಗಿದ್ದು, ನದಿಯಲ್ಲಿ ಪೂಜೆ ಮಾಡುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಜಾರಿದ್ದಾರೆ. ಇದನ್ನು ಬಿಜೆಪಿ ಲೇವಡಿ ಮಾಡಿದೆ.

ಕಾವೇರಿ ನದಿಗೆ ತೆಪ್ಪದಲ್ಲಿ ಸಾಗಿ ಶಿವಕುಮಾರ್ ಅವರು ಸ್ನಾನ ಮಾಡಿ ಪೂಜೆ ಸಲ್ಲಿಸಲೆಂದು ಕುಳಿತುಕೊಳ್ಳುವಾಗ ಆಯತಪ್ಪಿ ಕೊಂಚ ವಾಲಿದ್ದಾರೆ. ಇದರ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ವಿಡಿಯೋ ವನ್ನು ಟ್ವೀಟ್ ಮಾಡಿರುವ ಬಿಜೆಪಿ ಡಿ.ಕೆ. ಶಿವಕುಮಾರ್ ದಾಟಲಿಲ್ಲ, ಮೇಕೆಯಾದರೂ ದಾಟಲಿ ಎಂದು ವ್ಯಂಗ್ಯ ಮಾಡಿದೆ.

 

Comments are closed.