ಬೆಂಗಳೂರು: ಸಚಿವ ಸೋಮಶೇಖರ್ ಪುತ್ರ ನಿಶಾಂತ್ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಲ್ಲಿ ಖ್ಯಾತ ಜ್ಯೋತಿಷಿಯೊಬ್ಬರ ಪುತ್ರ ರಾಹುಲ್ ಭಟ್ ಸೇರಿ ಇಬ್ಬರನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.
ಬ್ಲ್ಯಾಕ್ ಮೇಲ್ ಮಾಡಿದ ಕುರಿತು ಸೈಬರ್ ಕ್ರೈಮ್ ಪೊಲೀಸರಿಗೆ ಸಚಿವರ ಪುತ್ರ ನಿಶಾಂತ್ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೇಸ್ ದಾಖಲು ಮಾಡಿ ತನಿಖೆ ನಡೆಸಿದ ಸಮಯದಲ್ಲಿ ಹಲವು ವಿಚಾರಗಳು ಬಯಲಿಗೆ ಬಂದಿದ್ದು, ಎಸ್ ಟಿ ಸೋಮಶೇಖರ್ ಅವರ ಬಳಿ ಈ ಹಿಂದೆ ಕೆಲಸ ಮಾಡುತ್ತಿದ್ದ ಓರ್ವ ಗನ್ ಮೆನ್ ಈ ಕೃತ್ಯ ಎಸಗಿದ್ದು, ಆತನೆ ಎಲ್ಲರ ನಂಬರ್ ನೀಡಿರುವುದು ಪತ್ತೆಯಾಗಿದೆ. ಗನ್ ಮೆನ್ ನನ್ನ ಸಿಸಿಬಿ ಪೊಲೀಸರು ಗೋವಾದಿಂದ ವಶಕ್ಕೆ ಪಡೆದುಕೊಂಡು ಬಂದಿದ್ದಾರೆ.
ತನಿಖೆ ವೇಳೆ ವಿಜಯಪುರ ಜಿಲ್ಲೆಯ ಓರ್ವ ಶಾಸಕರ ಪುತ್ರಿ ಮತ್ತು ಆರ್. ಟಿ. ನಗರದಲ್ಲಿ ನೆಲೆಸಿರುವ ಒರ್ವ ಜ್ಯೋತಿಷಿಯ ಪುತ್ರ ಭಾಗಿ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸದ್ಯ ಶಾಸಕರ ಮಗಳು ಲಂಡನ್ ನಲ್ಲಿ ಇದ್ದಾಳೆ ಎಂದು ತಿಳಿದು ಬಂದಿದೆ.
ಕೃತ್ಯಕ್ಕೆ ಲಂಡನ್ ಮೂಲದ ಬಳಸಿ ಸಿಮ್ ಕಾರ್ಡ್ ಬಳಸಲಾಗಿದ್ದು, ವಾಟ್ಸ್ ಆಪ್ ಕ್ರಿಯೇಟ್ ಮಾಡಿ , ಅದರಿಂದಲೇ ವಿಡಿಯೋ ಕಳಿಸಿ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.
Comments are closed.